ಬೆಂಗಳೂರು:ಬಾಡಿಗೆದಾರನಿಂದ ಮನೆ ಮಾಲಕಿ ಕೊಲೆ ಮಾಡಿರುವ ಪ್ರಕರಣ ಇತ್ತೀಚೆಗೆ ನಗರದಲ್ಲಿ ನಡೆದಿತ್ತು. ಈ ವೇಳೆ ಹಲ್ಲೆಗೊಳಗಾಗಿದ್ದ ಆಸ್ಪತ್ರೆ ಸೇರಿದ್ದ ಮನೆ ಮಾಲಕಿಯ ಮಗಳು ಚೈತ್ರಾ ಇಂದು ಮೃತಪಟ್ಟಿದ್ದಾಳೆ.
ಬಾಡಿಗೆದಾರನಿಂದ ಹಲ್ಲೆ ಪ್ರಕರಣ: ಆಸ್ಪತ್ರೆಗೆ ದಾಖಲಾಗಿದ್ದ ಮನೆ ಮಾಲಕಿ ಮಗಳು ಸಾವು - ಚೈತ್ರಾ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ
ಬಾಡಿಗೆದಾರನಿಂದ ಮನೆ ಮಾಲಕಿ ಕೊಲೆ ನಡೆದಿತ್ತು. ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮನೆ ಮಾಲಕಿ ಲಕ್ಷ್ಮೀ ಅವರ ಮಗಳು ಚೈತ್ರಾ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ತಂದೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ರೆ, ಈ ಮಧ್ಯೆ ಹೆತ್ತವರಿಲ್ಲದೇ ಚೈತ್ರಾ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅನಾಥವಾಗಿದೆ. ಇದೇ ಫೆಬ್ರವರಿ 11ರ ಬೆಳಗಿನ ಜಾವ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಬಾಡಿಗೆಗಿದ್ದ ರಂಗಧಾಮಯ್ಯ ಮತ್ತು ಮನೆ ಮಾಲಕಿ ಲಕ್ಷ್ಮೀ ನಡುವೆ ಅನೈತಿಕ ಸಂಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ನಂತ್ರ ಲಕ್ಷ್ಮೀಯನ್ನ ಹತ್ಯೆಗೆದಿದ್ದ ರಂಗಧಾಮಯ್ಯ ಬಳಿಕ ಲಕ್ಷ್ಮೀ ಪತಿ ಶಿವರಾಜ್ ಹಾಗೂ ಅವರ ಮಗಳು ಚೈತ್ರಾ ಮೇಲೆ ಕೂಡ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಕೊನೆಗೆ ತಾನೂ ಚಾಕುವಿನಿಂದ ಇರಿದುಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮನೆ ಮಾಲಕಿಯ ಪತಿ ಶಿವರಾಜ್ ಹಾಗೂ ಮಗಳು ಚೈತ್ರಳನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿ ಚೈತ್ರ ಇಂದು ಕೊನೆಯುಸಿರೆಳೆದಿದ್ದಾಳೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ತಂದೆ ಶಿವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.