ಬೆಂಗಳೂರು: ಯುವಜನ ಸ್ವಲ್ಪ ಫ್ರೀ ಸಮಯ ಸಿಕ್ಕಿದ್ರೂ ಸಾಕು ಟಿಕ್ ಟಾಕ್ ಆ್ಯಪ್ನಲ್ಲಿ ಸಮಯ ಕಳೀತಾರೆ. ಮನರಂಜನೆಗಾಗಿ ಅತಿಹೆಚ್ಚು ಬಳಕೆಯಾಗ್ತಿರೋ ಟಿಕ್ ಟಾಕ್ ಆ್ಯಪ್ಅನ್ನು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಕೋವಿಡ್-19 ಜನಜಾಗೃತಿ ಮೂಡಿಸಲು ಬಳಸುತ್ತಿದೆ.
ಟಿಕ್ ಟಾಕ್ ಈಗ ಕೊರೊನಾ ಜನಜಾಗೃತಿಗೆ ಬಳಕೆ: ಸರ್ಕಾರದ ವಿನೂತನ ಪ್ರಯತ್ನ - ಟಿಕ್ಟಾಕ್ ವೀಡಿಯೋಗಳು
ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಲು ಸರ್ಕಾರ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ. ಟಿಕ್ ಟಾಕ್ ಮೂಲಕ ಜನರನ್ನು ತಲುಪುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಮಕ್ಕಳ ಮೂಲಕ, ಯುವಕರ ಮೂಲಕ, ಕನ್ನಡ ನಟ-ನಟಿಯರನ್ನೂ ಒಗ್ಗೂಡಿಸಿ ಕೊರೊನಾ ಸೋಂಕನ್ನು ತಡೆಯುವ ಬಗ್ಗೆ ವಿನೂತನವಾದ ವಿಡಿಯೋಗಳನ್ನು ಮಾಡಿ ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗ್ತಿದೆ.
ಮಕ್ಕಳ ಮೂಲಕ, ಯುವಕರ ಮೂಲಕ, ಕನ್ನಡ ನಟ-ನಟಿಯರನ್ನೂ ಒಗ್ಗೂಡಿಸಿ ಕೊರೊನಾ ಸೋಂಕನ್ನು ತಡೆಯುವ ಬಗ್ಗೆ ವಿನೂತನವಾದ ವಿಡಿಯೋಗಳನ್ನು ಮಾಡಿ ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗ್ತಿದೆ. ಅಷ್ಟೇ ಅಲ್ಲ ಜನರೂ ಕೂಡಾ ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ವಿಡಿಯೋ ಮಾಡಿದ್ದರೆ, ಈ ಆ್ಯಪ್ಗೆ ಟ್ಯಾಗ್ ಮಾಡುವ ಅವಕಾಶ ನೀಡಿದೆ. ಅಲ್ಲದೆ ಟಿಕ್ ಟಾಕ್ ಜನಜಾಗೃತಿಯ ವಿಡಿಯೋಗಳನ್ನು ಹೆಚ್ಚೆಚ್ಚು ಲೈಕ್ ಮಾಡುವಂತೆ, ಟ್ಯಾಗ್ ಮಾಡುವಂತೆ ಮನವಿ ಮಾಡ್ತಿದೆ.
ಕರ್ನಾಟಕ ಸರ್ಕಾರ ಕೋವಿಡ್-19 ಮಣಿಸಲು ಸಕಲ ಪ್ರಯತ್ನ ಮಾಡುವುದರೊಂದಿಗೆ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಬಳಸುತ್ತಿದೆ. ಮೂರಡಿ ದೂರದಲ್ಲಿರಿ, ಮಾಸ್ಕ್ ಹಾಕಿ, ಆಗಾಗ ಕೈ ತೊಳ್ಕೊಂಡು, ಮನೆಯಲ್ಲೇ ಇದ್ದು ಹೇಗೆಲ್ಲ ಕ್ರಿಯಾಶೀಲರಾಗಿರಬೇಕು ಎಂಬೆಲ್ಲಾ ಟಿಕ್ ಟಾಕ್ ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತಿವೆ.