ಕರ್ನಾಟಕ

karnataka

ETV Bharat / state

ಟಿಕ್‌ಟಾಕ್​ ಸಹವಾಸ ಸಾಕಪ್ಪಾ ಸಾಕು ಅಂತಿದ್ದಾರೆ ಬಳಕೆದಾರರು.. ಯಾಕೆ ಅಂತೀರಾ? - tiktok

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕರು ಚೀನಾದ ಬೀಜಿಂಗ್ ಬೈಟ್ ಡ್ಯಾನ್ಸ್ ಕೋ ಸಂಸ್ಥೆಗೆ ಸೇರಿದ ಟಿಕ್‌ಟಾಕ್ ವಿಡಿಯೋ ಅಪ್ಲಿಕೇಷನ್‌ನ ತಮ್ಮ ಮೊಬೈಲ್​​ಗಳಿಂದ ಡಿಲೀಟ್​​ ಮಾಡುತ್ತಿದ್ದಾರೆ.

tiktok app uninstalled by users after corona outbreak
ಕೊರೊನಾ ಎಫೆಕ್ಟ್​: ಟಿಕ್​-ಟಾಕ್​ ಸಹವಾಸ ಸಾಕಪ್ಪಾ ಸಾಕು ಅಂತ್ತಿದ್ದಾರೆ ಬಳಕೆದಾರರು

By

Published : Apr 7, 2020, 9:33 PM IST

ಬೆಂಗಳೂರು :ಯುವಜನರ ನೆಚ್ಚಿನ ವಿಡಿಯೋ ಶೇರಿಂಗ್​ ಆ್ಯಪ್​ ಆಗಿದ್ದ ಟಿಕ್​ಟಾಕ್​ ವಿಶ್ವದಲ್ಲೇ ಸಖತ್​ ಸೌಂಡ್ ಮಾಡಿತ್ತು. ಅತ್ಯಂತ ವೇಗವಾಗಿ ಪ್ರಸಿದ್ಧಿಯನ್ನೂ ಪಡೆದಿತ್ತು. ಆದ್ರೀಗ ಈ ಆ್ಯಪ್​ ಬಳಕೆದಾರರು ಟಿಕ್​ಟಾಕ್​ ಸಹವಾಸ ಸಾಕು ಅಂತ ಆ್ಯಪ್​ ಡಿಲೀಟ್ ಮಾಡುತ್ತಿದ್ದಾರೆ.

ಟಿಕ್‌ಟಾಕ್​ ಸಹವಾಸ ಸಾಕಪ್ಪಾ ಸಾಕು ಅಂತಿದ್ದಾರೆ ಬಳಕೆದಾರರು.. ಯಾಕೆ ಅಂತೀರಾ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕರು ಚೀನಾದ ಬೀಜಿಂಗ್ ಬೈಟ್ ಡ್ಯಾನ್ಸ್ ಕೋ ಸಂಸ್ಥೆಗೆ ಸೇರಿದ ಟಿಕ್‌ಟಾಕ್ ವಿಡಿಯೋ ಅಪ್ಲಿಕೇಷನ್‌ನ ತಮ್ಮ ಮೊಬೈಲ್​​ಗಳಿಂದ ಡಿಲೀಟ್​​ ಮಾಡುತ್ತಿದ್ದಾರೆ.

ಚೀನಾದಿಂದ ಯಾವಾಗ ಕೊರೊನಾ ವೈರಸ್ ಹರಡಲು ಆರಂಭಿಸಿತೋ ಅಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಅನ್‌ ಇನ್ಸ್​ಸ್ಟಾಲ್​ ಅಭಿಯಾನ ಶುರುವಾಯ್ತು. ಚೀನಾ ದೇಶದ ಸಂಸ್ಥೆ ಆ್ಯಪ್ ಬಿಲ್ಡ್ ಮಾಡಿದೆ. ನಾವು ಯಾಕೆ ಬಳಕೆ ಮಾಡಬೇಕು ಅಂತಾ ಅಭಿಯಾನ ಶುರುವಾಗಿದೆ. ಇದೇ ಕಾರಣಕ್ಕೆ ಹಲವರು ಇದೀಗ ಆ್ಯಪ್ ಡಿಲೀಟ್​ ಮಾಡಲು ಮುಂದಾಗಿದ್ದಾರೆ.

ABOUT THE AUTHOR

...view details