ಕರ್ನಾಟಕ

karnataka

ETV Bharat / state

ಅಮಿತ್ ಶಾ ಭೇಟಿ: ಬಿಜೆಪಿ ಕಚೇರಿಗೆ ಪೊಲೀಸ್ ಸರ್ಪಗಾವಲು - Tight security to bjp office due to amith shah visit

ಪಕ್ಷದ ರಾಜ್ಯಾಧ್ಯಕ್ಷರ ವಾಹನವನ್ನೂ ಕಚೇರಿಯ ಪಾರ್ಕಿಂಗ್ ನಿಂದ ಹೊರಗೆ ಕಳುಹಿಸಲಾಗಿದ್ದು, ಇಡೀ ಕಚೇರಿಯನ್ನು ಎಸ್​ಪಿ ಸುಪರ್ದಿಗೆ ಪಡೆದುಕೊಂಡಿದೆ. ಒಂದೂವರೆ ಗಂಟೆ ಕಾಲ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿಯವರೆಗೂ ಬಿಜೆಪಿ ಕಚೇರಿ ಎಸ್​ಪಿ ನಿಯಂತ್ರಣದಲ್ಲಿರಲಿದ್ದು, ಕಚೇರಿ ಸುತ್ತಮುತ್ತಲಿನ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಇರಲಿದೆ.

ಬಿಜೆಪಿ ಕಚೇರಿಗೆ ಪೊಲೀಸ್ ಸರ್ಪಗಾವಲು
ಬಿಜೆಪಿ ಕಚೇರಿಗೆ ಪೊಲೀಸ್ ಸರ್ಪಗಾವಲು

By

Published : Apr 1, 2022, 5:56 PM IST

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಟೈಟ್ ಸೆಕ್ಯೂರಿಟಿ ಕಲ್ಪಿಸಲಾಗಿದೆ. ಕಚೇರಿ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಚೇರಿ ಮುಂದಿನ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬಿಜೆಪಿ ಕಚೇರಿಗೆ ಪೊಲೀಸ್ ಸರ್ಪಗಾವಲು

ಸದ್ಯ ಸಾರ್ವಜನಿಕ ಸಂಚಾರಕ್ಕೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಿದ್ದು, ಸಂಜೆ 6 ಗಂಟೆ ನಂತರ ಸಾರ್ವಜನಿಕರಿಗೂ ಸಂಚಾರ ನಿರ್ಬಂಧಿಸಲಾಗಿದೆ. ಕಚೇರಿ ಅಕ್ಕಪಕ್ಕದಲ್ಲಿರುವ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ಸಂಪೂರ್ಣವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇನ್ನು ಬಿಜೆಪಿ ಕಚೇರಿಯಲ್ಲಿಯೂ ಸೀಮಿತ ಸಂಖ್ಯೆಯ ಸಿಬ್ಬಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರ ವಾಹನವನ್ನೂ ಕಚೇರಿಯ ಪಾರ್ಕಿಂಗ್ ನಿಂದ ಹೊರಗೆ ಕಳುಹಿಸಲಾಗಿದ್ದು, ಇಡೀ ಕಚೇರಿಯನ್ನು ಎಸ್​ಪಿ ಸುಪರ್ದಿಗೆ ಪಡೆದುಕೊಂಡಿದೆ. ಒಂದೂವರೆ ಗಂಟೆ ಕಾಲ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿಯವರೆಗೂ ಬಿಜೆಪಿ ಕಚೇರಿ ಎಸ್​ಪಿ ನಿಯಂತ್ರಣದಲ್ಲಿರಲಿದ್ದು, ಕಚೇರಿ ಸುತ್ತಮುತ್ತಲಿನ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಇರಲಿದೆ. ಈಗಾಗಲೇ ಕೋರ್ ಕಮಿಟಿ ಸಭೆಗೆ ಭಾಗಿಯಾಗಲು ಸದಸ್ಯರು ಒಬ್ಬೊಬ್ಬರಾಗಿ ಕಚೇರಿ ಕಡೆಗೆ ಆಗಮಿಸುತ್ತಿದ್ದಾರೆ.

ಓದಿ:ಶಿವಕುಮಾರ ಶ್ರೀಗಳಿಗೆ ಭಾರತರತ್ನ ನೀಡಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details