ಕರ್ನಾಟಕ

karnataka

ETV Bharat / state

ಆರ್.ಆರ್.ನಗರದಲ್ಲಿ ಬಿಗಿ ಭದ್ರತೆ, 9 ಕಡೆಗಳಲ್ಲಿ ಚೆಕ್‌ಪೋಸ್ಟ್​ ನಿರ್ಮಾಣ - tight security in RRNagar

ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಎಂಟ್ರಿ ಹಾಗೂ ಎಕ್ಸಿಟ್ ಕೊಡುವ ಕಡೆಗಳಲ್ಲಿ ಪೊಲೀಸರು ಚೆಕ್ ಪೋಸ್ಟ್​ ಸ್ಥಾಪಿಸಿದ್ದು, 45 ಮಂದಿ ಸರ್ಕಾರಿ ಸಿಬ್ಬಂದಿ ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್.ಆರ್ ನಗರ ಚುನಾವಣೆ ಹಿನ್ನೆಲೆ ಬಿಗಿ ಭದ್ರತೆ
ಆರ್.ಆರ್ ನಗರ ಚುನಾವಣೆ ಹಿನ್ನೆಲೆ ಬಿಗಿ ಭದ್ರತೆ

By

Published : Oct 27, 2020, 11:59 AM IST

ಬೆಂಗಳೂರು:ಆರ್.ಆರ್.ನಗರ ಉಪಚುನಾವಣೆ ಕಾರಣ ಈ ಪ್ರದೇಶಕ್ಕೆ ಎಂಟ್ರಿ ಹಾಗೂ ಎಕ್ಸಿಟ್ ಕೊಡುವ ಕಡೆಗಳಲ್ಲಿ ಚೆಕ್‌ಪೋಸ್ಟ್​ ಸ್ಥಾಪಿಸಲಾಗಿದ್ದು, ತಪಾಸಣೆಗಾಗಿ ಎಸ್​ಎಸ್​ಟಿ ತಂಡ ನಿಯೋಜನೆ ಮಾಡಲಾಗಿದೆ.

ಎಸ್​ಎಸ್​ಟಿ ಟೀಂನಲ್ಲಿ ಇಬ್ಬರು ಬಿಬಿಎಂಪಿ ಎಂಜಿನಿಯರ್​ಗಳು, ಇಬ್ಬರು ಪೊಲೀಸ್ ಸಿಬ್ಬಂದಿ, ಓರ್ವ ಅಬಕಾರಿ ಸಿಬ್ಬಂದಿ ಸೇರಿ ಒಟ್ಟು 5 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಆರ್.ಆರ್ ನಗರ ಚುನಾವಣೆ ಹಿನ್ನೆಲೆ ಬಿಗಿ ಭದ್ರತೆ

ಐಡಿಯಲ್ ಹೋಮ್ಸ್‌ (ಆರ್.ಆರ್.ನಗರ ಆರ್ಚ್ ಎಂಟ್ರೆನ್ಸ್), ಎಸ್​ವಿಕೆ ಕಲ್ಯಾಣಮಂಟಪ ರಸ್ತೆ (80 ಫೀಟ್ ರಿಂಗ್ ರೋಡ್, ಜ್ಞಾನ ಜ್ಯೊತಿ‌ನಗರ), ರಿಲಯನ್ಸ್ ಫ್ರೆಶ್ ಹತ್ತಿರ(ಡಿ ಗ್ರೂಪ್ ಲೇಔಟ್ ಮುದ್ದಿನ ಪಾಳ್ಯ), ಆದೀಶ್ವರ ಶೋ ರೂಮ್ (ಮಾಗಡಿ ಮೈನ್ ರೋಡ್ ಸುಂಕದ ಕಟ್ಟೆ), ಹೆಚ್​ಎಂಟಿ ಸರ್ವಿಸ್ ರಸ್ತೆ, ಯೂಕೋ ಬ್ಯಾಂಕ್ ಹತ್ತಿರ ಜಾಲಹಳ್ಳಿ, ಕೂಲಿನಗರ ಬ್ರಿಡ್ಜ್, ಲಗ್ಗೆರೆ ವಾರ್ಡ್ (ನಂದಿನಿ ಲೇಔಟ್), ಶಂಕರ ನಗರ ರೈಲ್ವೇ ಗೇಟ್ ಹತ್ತಿರ (ರಾಮಯ್ಯ ಸಮಾಧಿ, ಜೆಪಿ ಪಾರ್ಕ್ ಮತ್ತಿಕೆರೆ), ಉತ್ತರ ಹಳ್ಳಿ ಚೆನ್ನಸಂದ್ರ ಮೈನ್ ರೋಡ್, ಮೆಟ್ರೋ ರೈಲ್ವೆ ಸ್ಟೇಷನ್ (ಪೀಣ್ಯಾ) ಗಳಲ್ಲಿ ಚೆಕ್​ಪೋಸ್ಟ್​ ಸ್ಥಾಪಿಸಲಾಗಿದೆ.

45 ಮಂದಿ ಸರ್ಕಾರಿ ಸಿಬ್ಬಂದಿ ಮೂರು ಶಿಫ್ಟ್ ಗಳಲ್ಲಿ ಕಾರ್ಯನಿರ್ವಹಿಸಿತ್ತಿದ್ದು, ಚೆಕ್​ಪೋಸ್ಟ್​ಗಳಲ್ಲಿ ಎಸ್​ಎಸ್​ಟಿ ಟೀಂ ನ ಹೊರತಾಗಿಯೂ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಅನುಮಾನ ಬರುವ ವಾಹನಗಳ ಪರಿಶೀಲನೆ ನಡೆಯುತ್ತಿದೆ.

ಆರ್.ಆರ್. ನಗರ ವ್ಯಾಪ್ತಿಯಲ್ಲಿ ಬರುವ ಯಾವುದೇ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಇಲ್ಲ. ಬಿಬಿಎಂಪಿ, ಅಬಕಾರಿ, ಪೊಲೀಸ್ ಸಿಬ್ಬಂದಿಗಳನ್ನು ಬೇರೆಡೆಯಿಂದ ಕರೆ ತಂದು ನಿಯೋಜನೆ ಮಾಡಲಾಗಿದೆ.

ABOUT THE AUTHOR

...view details