ಬೆಂಗಳೂರು:ಆರ್.ಆರ್. ನಗರ ಉಪಚುನಾವಣೆ ಹಿನ್ನೆಲೆ ಕ್ಷೇತ್ರದಾದ್ಯಂತ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತೆ ಬಿಗಿಗೊಳಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತರು ಹಾಗೂ ಡಿಸಿಪಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಗಸ್ತು ತಿರುಗಲಿದ್ದಾರೆ.
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಭದ್ರತೆ ಒದಗಿಸಲಾಗಿದ್ದು, 112 ಮೊಬೈಲ್ ಸೆಕ್ಟರ್, 19 ಸೂಪರ್ವೈಸಿಂಗ್ ಮೊಬೈಲ್ ಅಳವಡಿಕೆ ಮಾಡಲಾಗಿದೆ. 36 ಸಬ್ ಇನ್ಸ್ಪೆಕ್ಟರ್, 21 ಇನ್ಸ್ಪೆಕ್ಟರ್, 3 ಕೇಂದ್ರ ಸುರಕ್ಷಾ ಪಡೆ, 20 ಸಿಎಆರ್, 19 ಕೆಎಸ್ಆರ್ಪಿ ತುಕಡಿ ಹಾಗೂ 32 ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಎಲ್ಲಾ ಮತಗಟ್ಟೆಗಳ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
141 ಸ್ಥಳಗಳಲ್ಲಿ 678 ಮತಗಟ್ಟೆ, 596 ಸೂಕ್ಷ್ಮ, 82 ಅತಿ ಸೂಕ್ಷ್ಮ ಮತಗಟ್ಟೆ:
36 - ಸಬ್ ಇನ್ಸ್ಪೆಕ್ಟರ್ ಮೊಬೈಲ್ ಸೆಕ್ಟರ್
36 - ಸಬ್ ಇನ್ಸ್ಪೆಕ್ಟರ್
19 - ಸೂಪರ್ವೈಸಿಂಗ್ ಮೊಬೈಲ್ ಸೆಕ್ಟರ್
11- ಇನ್ಸ್ಪೆಕ್ಟರ್
8 - ಎಸಿಪಿ
30 - ಇನ್ಸ್ಪೆಕ್ಟರ್
94 - ಸಬ್ ಇನ್ಸ್ಪೆಕ್ಟರ್