ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ಸಂಭ್ರಮಕ್ಕೆ ಬೆಂಗಳೂರು ಸಜ್ಜು.. ಸೆಲ್ಫಿಗೆ ಕಡಿವಾಣ ಹಾಕುವಂತೆ ಕಮಿಷನರ್ ಮನವಿ - ಭಾಸ್ಕರ್ ರಾವ್

ನಾಳೆ ಬೆಂಗಳೂರಿನಲ್ಲಿ ನಡೆಯುವ 73ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

By

Published : Aug 14, 2019, 9:13 AM IST

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಿಲಿಕಾನ್ ಸಿಟಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ‌ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ

ಈ ಬಗ್ಗೆ ಮಾತನಾಡಿರುವ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸ್ವಾತಂತ್ರ್ಯ ದಿನಚಾರಣೆಗೆ ಬೇಕಾಗಿರುವ ಎಲ್ಲ ರೀತಿಯ ಭದ್ರತೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಮಾಣಿಕ್ ಷಾ ಪೆರೇಡ್ ಮೈದಾನ ಸುತ್ತ ಭದ್ರತೆ ಕೈಗೊಳ್ಳಲಾಗಿದ್ದು, 10 ದಿನಗಳಿಂದ‌ ವ್ಯವಸ್ಥಿತವಾಗಿ ಸಿದ್ದತೆ ಮಾಡಲಾಗಿದೆ. ಸ್ವಾತಂತ್ರ್ಯ ದಿನ ಬೆಳಗ್ಗೆ 8.50 ರಿಂದ 9.00 ಗಂಟೆಗೆ ಮುಖ್ಯಮಂತ್ರಿಗಳು ಧ್ವಜಾರೋಹಣ ‌ಮಾಡಿದ ನಂತರ 34ಕ್ಕೂ ಹೆಚ್ಚು ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.

ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

ಈಗಾಗಲೆ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಭದ್ರತೆ ದೃಷ್ಟಿಯಿಂದ ಕ್ರಮ ಕೈಗೊಳಲಾಗಿದ್ದು ಅದರಲ್ಲೂ ಮೆಜೆಸ್ಟಿಕ್ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ಸ್ಟೆಷನ್ ಮೇಲೆ ನಿಗಾ ಇಟ್ಟು ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆಯಾಲಾಗುತ್ತೆ. ಹಾಗೆ ‌ಮಾಣಿಕ್ ಷಾ ಮೈದಾನಕ್ಕೆ ಬರುವವರಿಗೆ ನಾಲ್ಕು ಬಣ್ಣದ ಪಾಸ್​ಗಳ ವ್ಯವಸ್ಥೆ ಮಾಡಲಾಗಿದ್ದು, ಹಳದಿ, ಬಿಳಿ, ಪಿಂಕ್, ಹಸಿರು ಬಣ್ಣದ ಪಾಸ್​ಗಳನ್ನು ನೀಡಲಾಗುತ್ತದೆ ಎಂದರು.

ಪೊಲೀಸ್ ಅಧಿಕಾರಿಗಳಿಗೆ ಭದ್ರತೆಯ ಜವಾಬ್ದಾರಿಯನ್ನ ನೀಡಿದ್ದು, ಅದರಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು , ಸಂಚಾರಿಗೆ ಹೆಚ್ಚುವರಿ ಆಯುಕ್ತ, ಆಡಳಿತ ಆಯೋಜನೆ, ಸಂಪನ್ಮೂಲ ಸಿಸಿಬಿ ಹೆಚ್ಚುವರಿ ಆಯುಕ್ತ, 11 ಡಿಸಿಪಿ, 23 ಸಹಾಯಕ, 78 ಇನ್ಸ್​​​ಸ್ಪೆಕ್ಟರ್, 175 ಸಬ್ ಇನ್ಸ್​​ಸ್ಪೆಕ್ಟರ್, 1108 ಕಾನ್​ಸ್ಟೇಬಲ್, 77 ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗೆ ಮಫ್ತಿ ಪೊಲೀಸರು 150 ಮಂದಿ, ಹೋಂ ಗಾರ್ಡ್​ಗಳು ಕೂಡಾ ಇದ್ದು ಒಟ್ಟು1906 ಜನ ಕಾರ್ಯನಿರ್ವಹಿಸಲಿದ್ದಾರೆ.

ಇ‌ನ್ನು ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿಗೆ ಕಡಿವಾಣ ಹಾಕುವಂತೆ ಕಮಿಷನರ್ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಸೆಲ್ಫಿ ಕ್ರೇಜ್ ಜಾಸ್ತಿ ಆಗಿದೆ ಇದರಿಂದ ವಾತವರಣದಲ್ಲಿ ಶಿಸ್ತು ಹಾಳಾಗುತ್ತದೆ. ಕಾರ್ಯಕ್ರಮ ನೋಡಲು ಬಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹೀಗಾಗಿ ಗ್ರೌಂಡ್​ನಲ್ಲಿ ಸಾರ್ವಜನಿಕರು ಶಿಸ್ತು ಪಾಲಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details