ಕರ್ನಾಟಕ

karnataka

ETV Bharat / state

Night Curfew: ಅತ್ತಿಬೆಲೆ ಗಡಿಯಲ್ಲಿ ತೀವ್ರ ಕಟ್ಟೆಚ್ಚರ, ಕಿ.ಮೀ ಗಟ್ಟಲೇ ಸಾಲುಗಟ್ಟಿ ನಿಂತ ವಾಹನಗಳು

ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಗಡಿಗಳಲ್ಲಿ ಅಂತಾರಾಜ್ಯ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಈ ನಿಟ್ಟಿನಲ್ಲಿ ಆನೇಕಲ್​ ತಾಲೂಕಿನ ಅತ್ತಿಬೆಲೆ ಬಳಿಯ ತಮಿಳುನಾಡು ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Tight Security
ಅತ್ತಿಬೆಲೆ ಗಡಿ

By

Published : Aug 7, 2021, 7:11 AM IST

ಆನೇಕಲ್ :ಕೋವಿಡ್ ಮೂರನೇ ಅಲೆ ತಡೆಯಲು ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದ್ದು, ಅನೇಕಲ್​​ ತಾಲೂಕು ಅತ್ತಿಬೆಲೆಯ ತಮಿಳುನಾಡು ಗಡಿಯಲ್ಲಿ ಪೊಲೀಸರು ಕಣ್ಗಾವಲಿಟ್ಟಿದ್ದಾರೆ.

ಗಡಿಯಲ್ಲಿ ಈಗಾಗಲೇ ಹೊರ ರಾಜ್ಯದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗ್ತಿದೆ. ಆರ್​​ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ದಾಖಲೆ ತೋರಿಸುವುದು ಕಡ್ಡಾಯವಾಗಿದೆ. ಇದ್ಯಾವುದೂ ಇಲ್ಲದ ಪ್ರಯಾಣಿಕರನ್ನು ಪೊಲೀಸರು ವಾಪಸ್ ಕಳಿಸುತ್ತಿದ್ದಾರೆ. ಕೆಲ ಪ್ರಯಾಣಿಕರನ್ನು ಗಡಿಯಲ್ಲೇ ಕೋವಿಡ್ ತಪಾಸಣೆಗೆ ಒಳಪಡಿಸಲಾಗ್ತಿದೆ.

ಗಡಿ ಟೋಲ್​ ಪ್ಲಾಝಾದಲ್ಲಿ ವಾಹನ ದಟ್ಟಣೆ

ಓದಿ : ಗಡಿ ಜಿಲ್ಲೆಗಳಿಗೆ ವೀಕೆಂಡ್ ಕರ್ಫ್ಯೂ: ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಸ್ತರಿಸಿ ಮಾರ್ಗಸೂಚಿ

ಅಂತಾರಾಜ್ಯ ಚೆಕ್​ಪೋಸ್ಟ್ ಬಳಿ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮಾರ್ಗವಾಗಿ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ ನೂರಾರು ವಾಹನಗಳು ಆಗಮಿಸುತ್ತಿದ್ದು, ಸಾವಿರಾರು ಪ್ರಯಾಣಿಕರನ್ನು ತಪಾಸಣೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಒಬ್ಬೊಬ್ಬರನ್ನೇ ತಪಾಸಣೆ ಮಾಡಿ ಬಿಡುವುದರಿಂದ ಗಡಿ ಟೋಲ್​ಗೇಟ್​ನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

ABOUT THE AUTHOR

...view details