ಬೆಂಗಳೂರು: ಭೂಗತ ಲೋಕದಲ್ಲಿ ಪ್ರಖ್ಯಾತಿ ಹೊಂದಿದ್ದ ಮುತ್ತಪ್ಪ ರೈ ಹಲವು ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ. ಈತನ ವಿರುದ್ಧ ರೌಡಿ ಶೀಟ್ ಫೈಲ್ ಮಾಡಲು ಬಹುತೇಕ ಪೊಲೀಸರು ಹೆದರುತ್ತಿದ್ದರು. ಈ ವೇಳೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ರೌಡಿ ಶೀಟರ್ ಪಟ್ಟಿ ತೆರೆದು ತನಿಖೆ ಆರಂಭ ಮಾಡಿದ್ದೆ. ಕ್ಯಾನ್ಸರ್ನಿಂದ ಸಾವಿಗೀಡಾದ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಕುರಿತು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಸವಿಸ್ತಾರವಾಗಿ ಮಾತನಾಡಿದ್ದಾರೆ.
ಕ್ರೈಂ ಲೋಕದಲ್ಲಿ ರೈ ಚಟುವಟಿಕೆಗಳು ಹೇಗಿದ್ದವು? ಎಂಬ ಕುರಿತಂತೆ ಅಶೋಕ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಮುತ್ತಪ್ಪ ರೈ ಪಾತಕಲೋಕದಲ್ಲಿ ತನ್ನದೇ ಆದ ಜಾಲವನ್ನು ಸೃಷ್ಟಿಸಿಕೊಂಡು ಪ್ರಖ್ಯಾತಿ ಹೊಂದಿದ್ದ. ಹಲವು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದರ ವಿರುದ್ಧ ತನಿಖೆ ಆರಂಭಿಸಿದ್ದೆ. ಈ ಹೊತ್ತಿಗಾಗಲೇ ಮುತ್ತಪ್ಪ ರೈ ಕ್ರೈಂ ಚಟುವಟಿಕೆಗಳು ಎಲ್ಲೆ ಮೀರಿದ್ದವು ಎಂದರು.
ಬೇರೆ ಬೇರೆ ಕಾರಣಗಳಿಂದ ಮುತ್ತಪ್ಪ ರೈ ಪೊಲೀಸರ ಎನ್ಕೌಂಟರ್ನಿಂದ ಕೂದಲೆಳೆ ಅಂತರದಲ್ಲಿ ಪಾರಾಗುತ್ತಿದ್ದ. ಇನ್ನು ಈತ ರಿಯಲ್ ಎಸ್ಟೇಟ್ ಉದ್ಯಮಿಯಾದ ಕಾರಣ, ನಗರದ ಬಹುತೇಕ ಕಡೆಗಳಲ್ಲಿ ಸೈಟ್ಗಳನ್ನು ತನ್ನ ಹೆಸರಿಗೆ ಮಾಡಿಕೊಂಡು ಎಮ್ಆರ್ ಎಂದು ಬೋರ್ಡ್ ಹಾಕುತ್ತಿದ್ದ.
ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಜೊತೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನ ಎಂಆರ್ ಎಂದರೆ ಏನು ಎಂಬುದು ಬಹುತೇಕ ಜನರಿಗೆ ಗೊತ್ತಿರಲಿಲ್ಲ. ಆ ನಂತರವಷ್ಟೇ ಅದರ ವಿಸ್ತಾರ ರೂಪ ಮುತ್ತಪ್ಪ ರೈ ಎಂಬುದು ಗೊತ್ತಾಯಿತು ಎಂದು ಅಶೋಕ್ ಅವರು ತಿಳಿಸಿದ್ದಾರೆ.