ಕರ್ನಾಟಕ

karnataka

ETV Bharat / state

ಬನ್ನೇರುಘಟ್ಟದಲ್ಲಿ ಮುದ್ದಾದ ನಾಲ್ಕು ಹುಲಿ-ಸಿಂಹ ಮರಿಗಳ ಜನನ - ಹುಲಿ ಹಾಗೂ ಸಿಂಹದ ಮರಿ ಜನನ

ಬನ್ನೇರುಘಟ್ಟ ‌ಝೂನಲ್ಲಿ ಹುಲಿ ಹಾಗೂ ಸಿಂಹದ ಮರಿಗಳ ಕಲರವ ಕೇಳಿಸುತ್ತಿದೆ. ಎರಡು ಹುಲಿ ಮರಿಗಳು ಹಾಗೂ ಎರಡು ಮುದ್ದಾದ ಸಿಂಹದ ಮರಿಗಳು ಜನಿಸಿವೆ.

Tiger and lion cubs
ಹುಲಿ-ಸಿಂಹ

By

Published : Apr 17, 2021, 7:29 PM IST

ಆನೇಕಲ್(ಬೆಂಗಳೂರು): ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿ ಹಾಗೂ ಸಿಂಹದ ಮರಿಗಳ ಕಲರವ ಮತ್ತಷ್ಟು ಹೆಚ್ಚಾಗಿದೆ. ಜೈವಿಕ ಉದ್ಯಾನದ ಹುಲಿ ಅನುಷ್ಕಾಗೆ ಮುದ್ದಾದ ಎರಡು ಹುಲಿ ಮರಿಗಳು ಹಾಗೂ ಸನಾ ಎಂಬ ಸಿಂಹಿಣಿಗೆ‌ ಎರಡು ಮುದ್ದಾದ ಮರಿಗಳು ಜನಿಸಿವೆ.

ಬನ್ನೇರುಘಟ್ಟದಲ್ಲಿ ಜನಿಸಿದ ಹುಲಿ ಹಾಗೂ ಸಿಂಹದ ಮರಿಗಳು

ಬನ್ನೇರುಘಟ್ಟ ‌ಝೂ ಆಸ್ಪತ್ರೆಯಲ್ಲಿ ಹುಲಿ ಹಾಗೂ ಸಿಂಹದ ಮರಿಗಳಿಗೆ ಆರೈಕೆ ಮಾಡಲಾಗುತ್ತಿದೆ. ಆದರೆ ಹುಟ್ಟಿದ‌ ಬಳಿಕ ತಾಯಿಯಿಂದ ಸೂಕ್ತ ಅರೈಕೆ ಸಿಗದ ಕಾರಣ ಮೃಗಾಲಯ ಸಿಬ್ಬಂದಿಯಿಂದಲೇ ಮರಿಗಳ ಆರೈಕೆ ನಡೆಯುತ್ತಿದೆ. ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್ ನೀಡಿ ಮರಿಗಳ ಆರೈಕೆ ಮಾಡಲಾಗುತ್ತಿದೆ.

ಸದ್ಯ ಎರಡು ಹುಲಿ ಹಾಗೂ ಎರಡು ಸಿಂಹದ ಮರಿಗಳು ಆರೋಗ್ಯವಾಗಿವೆ. ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ ಹಾಗೂ ಸಿಂಹದ‌ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 19 ಹುಲಿಗಳು ಹಾಗೂ 24 ಸಿಂಹಗಳಿವೆ.

ABOUT THE AUTHOR

...view details