ಬೆಂಗಳೂರು:ವಿಶ್ವವಿಖ್ಯಾತ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, 11 ದಿನಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಕರಗ ಮಹೋತ್ಸವ ಮುಂದಿನ ತಿಂಗಳ 9 ರವರೆಗೆ ನಡೆಯಲಿದೆ. ವಹ್ನಿಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆಮಾಡಿದೆ.
ತಿಗಳರಪೇಟೆಯ ಧರ್ಮರಾಯ ದೇಗುಲದಲ್ಲಿ ಬೆಳ್ಳಿ ರಥೋತ್ಸವ ಮತ್ತು ದ್ರೌಪದಿ ದೇವಿಗೆ ವಿಶೇಷವಾಗಿ ಅಲಂಕಾರವನ್ನು ಬೆಳಗಿನ ಜಾವ 1 ಗಂಟೆಗೆ ಮಾಡಲಾಗಿತ್ತು. 3 ಗಂಟೆಗೆ ಧ್ವಜ ಸ್ತಂಭ ನೆಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಸದ್ಯ ವಿವಿಧ ಪೂಜಾ ಕೈಂಕರ್ಯ ನಡೆಯುತ್ತಿದೆ ಎಂದು ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ ಸತೀಶ್ ಹೇಳಿದ್ದಾರೆ.
ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಏಪ್ರಿಲ್ 6 ರಂದು ರಾತ್ರಿ 12:30ರ ಬಳಿಕ ದ್ರೌಪದಿ ಕರಗ ಕುಂಬಾರಪೇಟೆ, ನಗರ್ತಪೇಟೆ ಗೊಲ್ಲರಪೇಟೆಗಳಲ್ಲಿ ಸಾಗಲಿದೆ. ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೂ ಕೂಡ ಕರಗ ಭೇಟಿ ನೀಡಲಿದೆ. ಮಾರನೆಯ ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಾಲಯ ತಲುಪಿ ಏಪ್ರಿಲ್ 8 ರ ಸಂಜೆ 4 ಗಂಟೆಗೆ ವಸಂತೋತ್ಸವ ನಡೆಯಲಿದೆ. ತಡ ರಾತ್ರಿ 12ಕ್ಕೆ ಧ್ವಜರೋಹಣ ಮೂಲಕ 2023ರ ಕರಗಕ್ಕೆ ತೆರೆ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳು ಮಾತನಾಡುವ ತಿಗಳರಿಂದ ಆಚರಣೆ:ಬೆಂಗಳೂರು ಕರಗವನ್ನು ಸಾಂಪ್ರದಾಯಿಕವಾಗಿ ತಮಿಳು ಮಾತನಾಡುವ ತಿಗಳರು ಎಂದು ಕರೆಯಲ್ಪಡುವವರು ವಿಜೃಂಭಣೆಯಿಂದ ಮಾಡುತ್ತಾರೆ. ಕಾಟನ್‌ಪೇಟೆಯಲ್ಲಿರುವ ಬೆಂಗಳೂರು ಕರಗವನ್ನು ಸಾಂಪ್ರದಾಯಿಕವಾಗಿ ತಮಿಳು ಮಾತನಾಡುವ ತಿಗಳರು ಆಚರಿಸುತ್ತಾರೆ ಎಂದು ಹೇಳಿದ್ದಾರೆ.
ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಕರಗ ಹೊರುವ ಮಹಿಳೆಯರಂತೆ ವೇಷ ಧರಿಸುವ ಪುರುಷರು:ಕರಗ ಎಂಬುದು ಹೂವಿನ ಮಣ್ಣಿನ ಮಡಕೆ ಎಂದು ಅನುವಾದಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯಂತೆ ವೇಷಭೂಷಣ ಧರಿಸಿದ ತಿಗಳರ ಪುರುಷರು ಕರಗವನ್ನು ಹೊರುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ದ್ರೌಪದಿ ಆದಿ ಶಕ್ತಿ ರೂಪದಲ್ಲಿ ಹಿಂದಿರುಗುತ್ತಾಳೆ ಎಂದು ಸಮುದಾಯದ ಜನರು ನಂಬುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
6 ಲಕ್ಷ ಜನರು ಸೇರುವ ನಿರೀಕ್ಷೆ:ಐತಿಹಾಸಿಕ ಬೆಂಗಳೂರು ಕರಗವು ನಗರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪ್ರದರ್ಶಿಸುತ್ತದೆ. ಈ ವರ್ಷ ದೌಪದಿ ದೇವಿ ಕರಗ ಮಹೋತ್ಸವದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸತೀಶ್ ತಿಳಿಸಿದ್ದಾರೆ.
ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಕರಗದ ಹಿನ್ನೆಲೆ ಏನು? :ದ್ವಾಪರಯುಗದಲ್ಲಿ ರಾಕ್ಷಸರ ಪಡೆಗಳನ್ನು ಸದೆ ಬಡಿಯಲು ದ್ರೌಪದಿ ಜನ್ಮ ತಾಳಿದ್ದಳು ಅನ್ನುತ್ತದೆ ಇಲ್ಲಿನ ನಂಬಿಕೆ. ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗ ಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗ ತಿಮಿರಾಸುರ ಎನ್ನುವ ರಾಕ್ಷಸ ಮಾತ್ರ ಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನ ಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿ ತಿಮಿರಾಸುರನನ್ನು ಸಂಹರಿಸುತ್ತಾಳೆ ಎನ್ನುವುದು ಕಥೆಯ ಸಾರಾಂಶ.
ಪುನಃ ಸ್ವರ್ಗಕ್ಕೆ ಹೊರಡುವಾಗ ವೀರಕುಮಾರರು ಇಲ್ಲೇ ನೆಲೆಸುವಂತೆ ಒತ್ತಾಯ ಮಾಡಿದಾಗ ವರ್ಷಕ್ಕೊಮ್ಮೆ ಚೈತ್ರ ಪೌರ್ಣಮಿ ದಿನದಂದು ಬರುವುದಾಗಿ ದ್ರೌಪದಿ ಮಾತುಕೊಟ್ಟಿದ್ದಾಳಂತೆ. ಹೀಗಾಗಿ, ಈ ದಿನದಂದೆ ವಿಶೇಷ ಪೂಜೆ ಮಾಡಿ ಕತ್ತಿ ಹಿಡಿಯುವ ವೀರಕುಮಾರರು ಅಂದರೆ ತಿಗಳ ಜನಾಂಗದವರು ಜೈಕಾರದೊಂದಿಗೆ ತಾಯಿಯ ದರ್ಶನ ಮಾಡುತ್ತಾರೆ.
ಇದನ್ನೂ ಓದಿ:ದ್ರೌಪತಮ್ಮ ದೇವಿಯ ಕರಗ ಮಹೋತ್ಸವ: ವಿಡಿಯೋ