ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀ ಬೃಂದಾವನಸ್ತ....ವಿದ್ಯಾಪೀಠ ಮಠದಲ್ಲಿ ಪಾಸ್​​ಗಾಗಿ ಮುಗಿಬಿದ್ದ ಭಕ್ತಗಣ! - ಶ್ರೀಗಳ ಅಂತಿಮದರ್ಶನಕ್ಕೆ ಪಾಸ್​​ಗಾಗಿ ಜನರ ಕ್ಯೂ ನ್ಯೂಸ್​

ಪೇಜಾವರ ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೋಡಲು ಸಾವಿರಾರು ಭಕ್ತರು ಬೆಂಗಳೂರಿನ ವಿದ್ಯಾಪೀಠ ಮಠದತ್ತ ಆಗಮಿಸಿದ್ದಾರೆ.

pass
ಪಾಸ್​​ಗಾಗಿ ಮುಗಿಬಿದ್ದ ನೂರಾರು ಭಕ್ತಗಣ

By

Published : Dec 29, 2019, 4:29 PM IST

ಬೆಂಗಳೂರು: ಪೇಜಾವರ ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೋಡಲು ಸಾವಿರಾರು ಭಕ್ತರು ನಗರದ ವಿದ್ಯಾಪೀಠ ಮಠದತ್ತ ಆಗಮಿಸಿದ್ದಾರೆ.

ವಿದ್ಯಾಪೀಠ ಮಠದಲ್ಲಿ ಶ್ರೀಗಳ ಅಂತಿಮ ವಿಧಿ ವಿಧಾನ ನಡೆಯಲಿದೆ. ಶ್ರೀಗಳ ಅಂತಿಮ‌ ದರ್ಶನ ಮಾಡಲು ಸಾವಿರಾರು ಭಕ್ತರು ಮಠದತ್ತ ಜಮಾಯಿಸಿದ್ದಾರೆ. ಆದರೆ ಮುಕ್ತ ಅವಕಾಶ ಇಲ್ಲದ ಕಾರಣ ಭಕ್ತರು ನಿರಾಶರಾಗಿದ್ದಾರೆ. ಮಠದ ಆಡಳಿತ ಮಂಡಳಿ ಭಕ್ತರ ಪ್ರವೇಶಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿದ್ದು, ಪಾಸ್ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.

ಪಾಸ್​​ಗಾಗಿ ಮುಗಿಬಿದ್ದ ಭಕ್ತಗಣ

ಪಾಸ್​​​ಗಾಗಿ ಮುಗಿ ಬಿದ್ದ ಹಿನ್ನೆಲೆ ಮಠದ ಸಿಬ್ಬಂದಿ ಪಾಸ್ ವಿತರಿಸಲು ಹರಸಾಹಸ ಪಟ್ಟರು. ಕೊನೆಗೆ ಪೊಲೀಸರು ನೆರೆದಿದ್ದ ನೂರಾರು ಭಕ್ತಾಧಿಗಳನ್ನು ನಿಯಂತ್ರಿಸಿದರು. ಬೆರಳೆಣಿಕೆಯಷ್ಟು ಪಾಸ್ ವಿತರಿಸಿದ್ದು, ಪಾಸ್ ಸಿಗದ ಹಲವು ಭಕ್ತಗಣ ನಿರಾಶೆಗೊಂಡಿದೆ.

For All Latest Updates

ABOUT THE AUTHOR

...view details