ಕರ್ನಾಟಕ

karnataka

ETV Bharat / state

ಬೆಂಗಳೂರಿನ ಅಪಾರ್ಟ್​​ಮೆಂಟ್​ ಮೇಲೆ ಎನ್​​ಸಿಬಿ ದಾಳಿ, ಮೂವರು ಯುವತಿಯರು ವಶಕ್ಕೆ - bengaluru drugs case

ಬೆಂಗಳೂರಿನ ಅಪಾರ್ಟ್​​ಮೆಂಟ್​ವೊಂದರಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಯುವತಿಯರನ್ನು ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

three-young-woman-detained-in-drugs-consuming-case
ಬೆಂಗಳೂರಿನ ಅಪಾರ್ಟ್​​ಮೆಂಟ್​ ಮೇಲೆ ಎನ್​​ಸಿಬಿ ದಾಳಿ, ಮೂವರು ಯುವತಿಯರು ವಶಕ್ಕೆ

By

Published : Dec 1, 2022, 10:30 AM IST

ಬೆಂಗಳೂರು:ನಗರದ ಮಡಿವಾಳದಲ್ಲಿನ ಅಪಾರ್ಟ್​​ಮೆಂಟ್​ವೊಂದರಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಎನ್​ಸಿಬಿ ಅಧಿಕಾರಿಗಳು ಮೂವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರತ ಮೂಲದ ಯುವತಿಯರು ಮನೆಗೆ ಡ್ರಗ್ಸ್ ತರಿಸಿಕೊಂಡು ಸೇವಿಸುತ್ತಾರೆ ಎಂಬ ಮಾಹಿತಿ ನಾರ್ಕೋಟಿಕ್ಸ್‌ ತಡೆ ಅಧಿಕಾರಿಗಳಿಗೆ ಸಿಕ್ಕಿತ್ತು. ಎಂಬಿಎ ವ್ಯಾಸಂಗ ಮಾಡಿರುವ ಯುವತಿಯರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಂಡು ಸೇವಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details