ಬೆಂಗಳೂರು: ಗಣೇಶ ಮೂರ್ತಿ ನುಂಗಿದ ಮೂರು ವರ್ಷದ ಮಗು ವೈದ್ಯರ, ಪೋಷಕರ ಸಮಯಪ್ರಜ್ಞೆಯಿಂದ ಬದುಕುಳಿದಿದೆ. ಗಣೇಶ ಮೂರ್ತಿ ಜೊತೆ ಮಗು ಆಟವಾಡುತ್ತಿದ್ದ ವೇಳೆ ಇಡಿಯಾಗಿ ನುಂಗಿದೆ, ಮನೆಯವರು ನೋಡಿದಾಗ ಮಗು ಉಸಿರಾಡಲಾಗದೆ ಒದ್ದಾಡುತ್ತಿತ್ತು. ತಕ್ಷಣ ಎಚ್ಚೆತ್ತ ಪೋಷಕರು ನಗರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೂರ್ತಿಯ ನುಂಗಿರುವುದು ಪತ್ತೆಯಾಗಿದೆ. ಇದೀಗ ಮೂರು ವರ್ಷದ ಮಗುವಿಗೆ ಚಿಕಿತ್ಸೆ ನೀಡಿ ಗಣೇಶನನ್ನು ಹೊರೆತೆಗೆದಿರುವ ವೈದ್ಯರು ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ 8:30ಕ್ಕೆ ಪೋಷಕರ ಗಮನಕ್ಕೆ ಈ ಘಟನೆ ತಿಳಿದುಬಂದಿದೆ. ಕೂಡಲೇ ಓಲ್ಡ್ ಏರ್ಪೋರ್ಟ್ ಬಳಿಯಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಗಂಟೆ ಚಿಕಿತ್ಸೆ ನೀಡಿ ಗಣೇಶನ ಮೂರ್ತಿ ವೈದ್ಯರು ಹೊರತೆಗೆದಿದ್ದಾರೆ.