ಕರ್ನಾಟಕ

karnataka

ETV Bharat / state

ನೆಲ ಮಹಡಿ ಅಂಗಡಿಗಳ ಟಾರ್ಗೆಟ್​ ಮಾಡಿ ನಗನಾಣ್ಯ ದೋಚುತ್ತಿದ್ದ ಮೂವರು ದರೋಡೆಕೋರರು ಅರೆಸ್ಟ್​ - Bangalore crime news

ನಗರದಲ್ಲಿ ನೆಲ ಮಹಡಿ ಅಂಗಡಿಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Arrest
ಬಂಧನ

By

Published : Feb 24, 2021, 5:48 PM IST

ಬೆಂಗಳೂರು: ನಗರದ ನೆಲಮಹಡಿಯಲ್ಲಿರುವ ಅಂಗಡಿಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರ ನಿವಾಸಿ ಮಹಾವೀರ್ ಜೈನ್ ನೀಡಿದ ದೂರಿನ ಮೇರೆಗೆ ಸುನಿಲ್, ತುಕಲಾಲ್ ಹಾಗೂ ರಾಕೇಶ್​​​​ನನ್ನು ಬಂಧಿಸಲಾಗಿದೆ‌. ಇವರಿಂದ 138 ಗ್ರಾಂ ಚಿನ್ನ, 2 ಕೆ.ಜಿ.ಬೆಳ್ಳಿ, ಎರಡು ಲ್ಯಾಪ್ ಟಾಪ್ ಹಾಗೂ 30 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ‌. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌.

ಮೂವರು ರಾಜಸ್ಥಾನ ಮೂಲದ ಆರೋಪಿಗಳಾಗಿದ್ದು, ಪ್ರಕರಣದ‌ ಪ್ರಮುಖ ಆರೋಪಿ ತುಕಲಾಲ್ ಶ್ರೀನಗರದಲ್ಲಿ 10 ವರ್ಷಗಳಿಂದ ಜ್ಯೂವೆಲ್ಲರಿ ಶಾಪ್ ಅಂಗಡಿ ಇಟ್ಟುಕೊಂಡಿದ್ದ. ಈತನಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಹಣ ಸಂಪಾದನೆ ಮಾಡಲು ಕಳ್ಳತನದ ದಾರಿ ಹುಡುಕಿದ ತುಕಲಾಲ್, ರಾಜಸ್ಥಾನದಲ್ಲಿರುವ ಸಹಚರ ಸುನೀಲ್, ರಾಕೇಶ್​​ನನ್ನು ಸಂಪರ್ಕಿಸಿದ್ದಾನೆ‌‌.

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಸುನೀಲ್ ಹಾಗೂ ಪೇಂಟರ್​ ಆಗಿರುವ ರಾಕೇಶ್​ಗೆ ಹಣ ಅವಶ್ಯಕತೆ ಇದ್ದಿದ್ದರಿಂದ ಸ್ನೇಹಿತನ ಅಣತಿಯಂತೆ ನಗರಕ್ಕೆ ಬಂದಿದ್ದಾರೆ. ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಟ್ಟೆಯಂಗಡಿ, ಪ್ರಾವಿಷನ್ ಸ್ಟೋರ್​ಗಳನ್ನು ಹಗಲಿನಲ್ಲಿ ಓಡಾಡಿ ಗುರುತಿಸಿಕೊಳ್ಳುತ್ತಿದ್ದರು. ಅಂಡರ್ ಗ್ರೌಂಡ್ ನಲ್ಲಿರುವ ಅಂಗಡಿಗಳಲ್ಲಿ ಕಳ್ಳತನ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದ ಆರೋಪಿಗಳು ಪೂರ್ವ ಸಂಚಿನಂತೆ ರಾತ್ರಿ ವೇಳೆ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.‌

ಇದೇ ರೀತಿ ಮಹಾವೀರ್ ಜೈನ್ ಮಾಲೀಕತ್ವದ ಶ್ರೀನಗರದ ಟೈಲ್ಸ್ ಶಾಪ್ ನಲ್ಲಿ ಶೆಟರ್ ಮುರಿದು ಕ್ಯಾಶ್ ಬ್ಯಾಕ್​ನಲ್ಲಿ ಇಟ್ಟಿದ್ದ 150 ಗ್ರಾಂ ಚಿನ್ನ, 4 ಕೆ‌.ಜಿ. ಬೆಳ್ಳಿ ಹಾಗೂ 2 ಲಕ್ಷ ರೂ‌.ನಗದು ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂಧ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details