ಕರ್ನಾಟಕ

karnataka

ETV Bharat / state

ಜೆಡಿಎಸ್ ಮಹಾಧಿವೇಶನದಲ್ಲಿ ಮೂರು ನಿರ್ಣಯಗಳಿಗೆ ಅನುಮೋದನೆ - ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ದೇವೇಗೌಡರ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಮಹಾ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ನಾಲ್ಕು ನಿರ್ಣಯಗಳಿಗೆ ಅನುಮೋದನೆ‌ ನೀಡಲಾಯಿತು.

JDS session
ಜೆಡಿಎಸ್ ಮಹಾಧಿವೇಶನದಲ್ಲಿ ಮೂರು ನಿರ್ಣಯಗಳಿಗೆ ಅನುಮೋದನೆ

By

Published : Feb 11, 2020, 6:17 PM IST

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ನಡೆದ ಮಹಾ ಅಧಿವೇಶನದಲ್ಲಿ ನಾಲ್ಕು ನಿರ್ಣಯಗಳಿಗೆ ಅನುಮೋದನೆ‌ ನೀಡಲಾಯಿತು.

ಜೆಡಿಎಸ್ ರಾಷ್ಟ್ರೀಯ ಮಹಾಧಿವೇಶನದಲ್ಲಿ ಪ್ರಧಾನಿ ಮೋದಿಯ ಆರ್ಥಿಕ ನೀತಿ ಖಂಡಿಸಿ ಆರ್ಥಿಕ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು. ಎರಡನೇಯದಾಗಿ ಸಿಎಎ ವಿರುದ್ಧದ ಜನ ಹೋರಾಟದಲ್ಲಿ ಜಾತ್ಯಾತೀತ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳು, ಎಲ್ಲಾ ವಿಚಾರವಂತರು ಪಾಲ್ಗೊಳ್ಳುವಂತೆ ಒತ್ತಾಯಿಸುವ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು.

ಮೂರನೇಯದಾಗಿ ಮಹಿಳೆಯರಿಗೆ ಶೇ. 33 ರಾಜಕೀಯ ಮೀಸಲಾತಿ ನೀಡುವ ನಿರ್ಣಯಕ್ಕೆ ಅನುಮೋದನೆ ಕೊಡಲಾಯಿತು.ರಾಷ್ಟ್ರೀಯ ಚುನಾವಣಾ ಅಧಿಕಾರಿಯನ್ನು ದೇವೇಗೌಡರಿಗೆ ಈ‌ ನೇಮಕಾತಿ ಮಾಡುವ ಅಧಿಕಾರ ನೀಡುವ ನಿರ್ಣಯಜೆಡಿಎಸ್ ಮಹಾಧಿವೇಶನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ, ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜೆಡಿಎಸ್ ಮಹಾಧಿವೇಶನದಲ್ಲಿ ಮೂರು ನಿರ್ಣಯಗಳಿಗೆ ಅನುಮೋದನೆ

ಆಪ್‌‌ನಂತೆ ಪಕ್ಷ ಸಂಘಟಿಸಬೇಕು:

ಜೆಡಿಎಸ್ ಪಕ್ಷವನ್ನು ಸಂಘಟಿಸಿ ಬಲವರ್ಧನೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಮಹಾಧಿವೇಶನದಲ್ಲಿ ಒತ್ತಾಯಿಸಿದರು. ಕೇಜ್ರಿವಾಲ್ ದಿಲ್ಲಿಯಲ್ಲಿ ಸಾಧಿಸಿದ್ದನ್ನು ನಾವೆಕೇ ರಾಜ್ಯದಲ್ಲಿ ಸಾಧಿಸಲು ಸಾಧ್ಯವಿಲ್ಲ?. ಆಪ್ ನಂತೆ ನಾವು ಪಕ್ಷ ಸಂಘಟನೆ ಮಾಡಿದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು. ಚುನಾವಣೆ ಬಂದಾಗ ಮಾತ್ರ ಸಕ್ರಿಯರಾದರೆ ಸಾಲದು. ಈ‌ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಬೇಕು. ಪಕ್ಷದ ಬಲವರ್ಧನೆ ಆಗಬೇಕು ಎಂದು ಅಭಿಪ್ರಾಯ ‌ಪಟ್ಟರು.ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್​​ನನ್ನು ಪ್ರಬಲವಾಗಿ ಬೆಳೆಸಬೇಕು ಎಂಬುದು ನನ್ನ ಒತ್ತಾಯ. ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಬೇಸತ್ತಿರುವ ಜನತಾ ಪರಿವಾರವನ್ನು ಒಗ್ಗೂಡಿಸಿದರೆ ಜೆಡಿಎಸ್​ನನ್ನು ರಾಜ್ಯದಲ್ಲಿ ಬಲಿಷ್ಠಗೊಳಿಸಬಹುದು ಎಂದು ಇದೇ ವೇಳೆ ಕರೆ ನೀಡಿದರು.

ABOUT THE AUTHOR

...view details