ಆನೇಕಲ್ : ಬೆಳ್ಳಂಬೆಳಗ್ಗೆ ಕರಡಿಯೊಂದು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಘಟನೆ ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಬಳಿ ನಡೆದಿದೆ.
ಬೆಳ್ಳಂ ಬೆಳಗ್ಗೆ ಕರಡಿ ದಾಳಿ: ಮೂವರಿಗೆ ಗಾಯ - bear attack
ಬೆಳ್ಳಂಬೆಳಗ್ಗೆಯೇ ಜನರ ಮೇಲೆ ಕರಡಿ ದಾಳಿ ನಡೆಸಿ ಮೂವರನ್ನು ಗಾಯಗೊಳಿಸಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಬಳಿ ನಡೆದಿದೆ.
![ಬೆಳ್ಳಂ ಬೆಳಗ್ಗೆ ಕರಡಿ ದಾಳಿ: ಮೂವರಿಗೆ ಗಾಯ bear attack](https://etvbharatimages.akamaized.net/etvbharat/prod-images/768-512-11207890-thumbnail-3x2-surya.jpg)
ಕರಡಿ ದಾಳಿ
ಕರಡಿ ದಾಳಿ
ಶೆಟ್ಟಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ, ರಾಮಕ್ಕ, ಮಂಜು ಪೊಲೀಸ್ ವೆಂಕಟಸ್ವಾಮಿ ಮೇಲೆ ಬಂದೆರಗಿದ ಕರಡಿ ಮೈ ಕೈ ಪರಚಿ ಗಾಯಗೊಳಿಸಿದೆ. ಗಾಯಾಳುಗಳು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ:ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ