ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮಹಾಮಾರಿ ಕೊರೊನಾಗೆ ಮತ್ತೆ ಮೂವರು ಬಲಿ...! - ಬೆಂಗಳೂರು ಕೊರೊನಾ ಸುದ್ದಿ

ಕೊರೊನಾ ಸೋಂಕಿನ ಪ್ರಭಾವ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಮಹಾಮಾರಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ.

Three people died by corona in Bangalore
ಸಿಲಿಕಾನ್​ ಸಿಟಿಯಲ್ಲಿ ಕೊರೊನಾಗೆ ಮೂವರು ಬಲಿ

By

Published : Jul 5, 2020, 1:55 PM IST

ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಿವಾಜಿನಗರದ ನಿವಾಸಿ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಇವರ ಗಂಟಲು ಪರೀಕ್ಷೆ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಛಲವಾದಿ ಪಾಳ್ಯ ಹಾಗೂ ಬಸವನಪುರ ವಾರ್ಡ್​ನಲ್ಲಿ ತಲಾ ಒಬ್ಬರು ಸಾವು:

ಛಲವಾದಿ ಪಾಳ್ಯದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ35 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಗೆಯೇ ಬಸವನಪುರ ವಾರ್ಡಿನ ಬೇತಲ್ ಲೇಔಟ್ ನಿವಾಸಿ 35 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ABOUT THE AUTHOR

...view details