ದೊಡ್ಡಬಳ್ಳಾಪುರ:ತಾಲೂಕಿನ ದಾಬಸ್ಪೇಟೆ-ದೊಡ್ಡಬಳ್ಳಾಪುರ ರಸ್ತೆಯ ಮೆಣಸಿಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಈ ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ ನಡೆದ ಅಪಘಾತದಲ್ಲಿ ಸತೀಶ್(60), ಪತ್ನಿ ಶಾಂತಮ್ಮ (50) ಎಂಬದಂಪತಿಸಾವನ್ನಪ್ಪಿದ್ದರು. ಈ ಎರಡು ಸಾವುಗಳನ್ನು ಅರಗಿಸಿಕೊಳ್ಳುವ ಮುನ್ನವೇ ಮೃತ ಸತೀಶ್ ತಂದೆ ಚಿಕ್ಕಬಚ್ಚೇಗೌಡ(95) ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.