ಕರ್ನಾಟಕ

karnataka

ETV Bharat / state

ತಡರಾತ್ರಿ ಸಿಎಂ ಮನೆ ಮುಂದೆ ವೀಲ್ಹಿಂಗ್: ಮೂವರು ಪೊಲೀಸ್ ವಶಕ್ಕೆ, ಸ್ಕೂಟರ್ ಜಪ್ತಿ - ಆರ್​.ಟಿ ನಗರ

ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಸ್ಕೂಟರ್ ವೀಲ್ಹಿಂಗ್ ಮಾಡಿದ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

wheeling in front of CM residence
ಸಿಎಂ ಮನೆ ಮುಂದೆ ವೀಲ್ಹಿಂಗ್

By

Published : Jul 29, 2021, 11:03 AM IST

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್​.ಟಿ. ನಗರದ ಮನೆ ಮುಂದೆ ಬುಧವಾರ ತಡರಾತ್ರಿ ಪುಂಡರು ಸ್ಕೂಟರ್​ ವೀಲ್ಹಿಂಗ್ ಮಾಡಿ ಕಿರಿ ಕಿರಿ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

ಸಿಎಂ ನಿವಾಸದ ಮುಂದೆ ಬಿಗಿ ಪೊಲೀಸ್ ಬಂದೋ ಬಸ್ತ್​ ಇದ್ದರೂ, ಕ್ಯಾರೆ ಅನ್ನದ ಪುಂಡರ ಗುಂಪು ವೇಗವಾಗಿ ಸ್ಕೂಟರ್​ ಓಡಿಸಿ, ವೀಲ್ಹಿಂಗ್ ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ. ಈ ವೇಳೆ ಡಿಯೋ, ಆ್ಯಕ್ಟಿವಾ ಸ್ಕೂಟರ್​ಗಳಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ, ಪೊಲೀಸರ ಮೇಲೆಯೇ ಗಾಡಿ ಹತ್ತಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ : ನಾಳೆ ದೆಹಲಿಗೆ ಹೋದ್ರೂ ಸಂಪುಟ ಚರ್ಚೆ ಇಲ್ಲ: ಸಂಪುಟ ವಿಸ್ತರಣೆ ವಿಳಂಬದ ಸುಳಿವು ನೀಡಿದ ಬೊಮ್ಮಾಯಿ

ಕೊನೆಗೂ ವೀಲ್ಹಿಂಗ್ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಆರ್​.ಟಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಕೃತ್ಯಕ್ಕೆ ಬಳಸಿದ ಸ್ಕೂಟರ್​ಗಳನ್ನು ಜಪ್ತಿ ಮಾಡಲಾಗಿದೆ. ​

ABOUT THE AUTHOR

...view details