ಬೆಂಗಳೂರು: ರಾಜ್ಯಕ್ಕೆ ಕಣ್ಣಿಗೆ ಕಾಣದ ಸೋಂಕು ಕಾಣಿಸಿಕೊಂಡಾಗ ಎಲ್ಲರೂ ಒಂದು ಕ್ಷಣ ಭೀತಿಗೊಂಡಿದ್ದು ಸತ್ಯ. ಸಾಂಕ್ರಾಮಿಕ ಕೊರೊನಾ ವೈರಸ್‌ನಿಂದಾಗಿ ಅದೆಷ್ಟೋ ಸಾವುನೋವು ಸಂಭವಿಸಿವೆ. ಕೊರೊನಾ ಬಂದು ವರ್ಷದ ನಂತರ ಕೋವಿಡ್ ಲಸಿಕೆ ಬಂತು. ಲಸಿಕೆ ಕೊರತೆ ನಡುವೆಯೂ ನಿತ್ಯ 5 ಲಕ್ಷ ಲಸಿಕೆ ನೀಡುವ ಟಾರ್ಗೆಟ್ ಇಟ್ಟುಕೊಂಡಿರುವ ಆರೋಗ್ಯ ಇಲಾಖೆಯು, ಇದೀಗ 195 ದಿನಗಳನ್ನು ಪೂರೈಸಿದ್ದು, 3 ಕೋಟಿಯಷ್ಟು ಜನರಿಗೆ ಲಸಿಕೀಕರಣವಾಗಿದೆ.
ಟಾಪ್ 10 ನಲ್ಲಿ ಇರುವ ರಾಜ್ಯಗಳು:
ಕೋವಿಡ್ ಲಸಿಕೀಕರಣದಲ್ಲಿ ರಾಜ್ಯಗಳ ಪೈಕಿ ಕರ್ನಾಟಕ 6 ನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯ ಇದ್ದು, ಮಹಾರಾಷ್ಟ್ರ 2, ಗುಜರಾತ್ 3ನೇ ಸ್ಥಾನದಲ್ಲಿದೆ. ಈ ಹಿಂದೆ ವಿಶ್ವ ಯೋಗ ದಿನದಂದು ನಡೆದ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು ಹಾಗೂ ಮಧ್ಯಪ್ರದೇಶ ಮೊದಲ, ಉತ್ತರ ಪ್ರದೇಶ 3ನೇ ಸ್ಥಾನದಲ್ಲಿತ್ತು. ಇದೀಗ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕಕ್ಕೆ ಲಸಿಕೆ ಕೊರತೆಯೋ, ಸರಿಯಾದ ಪೂರೈಕೆ ಆಗದ ಕಾರಣಕ್ಕೂ ಇದೀಗ ಆರಕ್ಕೆ ಇಳಿದಿದೆ. ಯಾವ್ಯಾವ ರಾಜ್ಯಗಳು ಎಷ್ಟು ಲಸಿಕೀಕರಣ ಪೂರೈಸಿದೆ ಅಂತ ನೋಡುವುದಾದರೆ..
ರಾಜ್ಯ | ಲಸಿಕೀಕರಣ |
ಉತ್ತರ ಪ್ರದೇಶ | 4,75,15,307 |
ಮಹಾರಾಷ್ಟ್ರ | 4,37,51,060 |
ಗುಜರಾತ್ | 3,29,77,185 |
ರಾಜಸ್ಥಾನ್ | 3,20,27,281 |
ಮಧ್ಯಪ್ರದೇಶ | 3,09,67,372 |
ಕರ್ನಾಟಕ | 3,00,12,137 |
ವೆಸ್ಟ್ ಬೆಂಗಾಲ್ | 2,91,33,070 |
ಬಿಹಾರ್ | 2,39,32,643 |
ತಮಿಳುನಾಡು | 2,26,19,384 |
ಆಂಧ್ರ ಪ್ರದೇಶ | 2,14,03,734 |
ಕೇರಳ | 1,97,62,659 |