ಬೆಂಗಳೂರು: ಲಾಕ್ಡೌನ್ನಲ್ಲಿ ಕೆಲಸವಿಲ್ಲದೇ ನಿಂತಿದ್ದ ರೋಡ್ ರೋಲರ್ ಅನ್ನೇ ಖದೀಮರು ತುಂಡು ತುಂಡು ಮಾಡಿ ಹೊತ್ತೊಯ್ದಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಆರೋಪಿ ಪವನ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಉಳಿದ ಇನ್ನಿಬ್ಬರ ಹುಟುಕಾಟಲ್ಲಿ ನಿರತರಾಗಿದ್ದಾರೆ.
ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್ ಮೂರು ತುಂಡುಗಳಾಗಿ ಬೇರ್ಪಡಿಸಿದ ದುಷ್ಕರ್ಮಿಗಳು ಪ್ರತಿ ಕೆ.ಜಿಗೆ 28 ರೂ ಅಂತೆ ಮಾರಾಟ ಮಾಡಿದ್ದಾರೆ. ಚಂದ್ರಾ ಲೇಔಟ್ ಬಳಿ ನಿಲ್ಲಿಸಿದ್ದ ರೋಡ್ ರೋಲರ್ ಅನ್ನ ಬೈದರಹಳ್ಳಿಯ ಬಳಿಯ ಸೀಗೆಹಳ್ಳಿಗೆ ಕದ್ದೊಯ್ದಿದ್ದರು. ಗ್ಯಾಸ್ ಕಟ್ಟರ್ ಮತ್ತು ಯಂತ್ರಗಳನ್ನು ಬಳಸಿ, ರೋಡ್ ರೋಲರ್ ಮೂರು ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಕ್ರ್ಯಾಪ್ ವ್ಯಾಪಾರಿಯೊಬ್ಬರು ಪ್ರತಿ ಕೆ.ಜಿಗೆ 28 ರೂ.ಗೆ ಖರೀದಿಸಲು ಒಪ್ಪಿಸಿದ್ದಾರೆ.
ಊರಿಂದ ಬಂದಾಗ ರೋಡ್ ರೋಲರ್ ನಾಪತ್ತೆ
ರೋಡ್ ರೋಲರ್ ಮಾಲೀಕ ವಿ ಸೆಲ್ವರಾಜ್ 12 ವರ್ಷಗಳ ಹಿಂದೆ ತಮಿಳುನಾಡು ಮೂಲದ ವ್ಯಕ್ತಿಯಿಂದ 2 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ರೋಲರ್ ಬಳಕೆಯಲ್ಲಿರಲಿಲ್ಲ ಮತ್ತು ಸೆಲ್ವರಾಜ್ ರೋಲರ್ ನಾಗರಾಭಾವಿಯ 80 ಅಡಿ ರಸ್ತೆ ಬಳಿ ಮೈದಾನದಲ್ಲಿ ನಿಲ್ಲಿಸಿದ್ದರು. ಬಳಿಕ ಸೆಲ್ವರಾಜ್ ಮೇ 25 ರಂದು ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದ. ಜೂನ್ 19 ರಂದು ಹಿಂದಿರುಗಿ ನೋಡಿದಾಗ ರೋಲರ್ ಸ್ಥಳದಿಂದ ಕಾಣೆಯಾಗಿತ್ತು. ಹೀಗಾಗಿ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.