ಆನೇಕಲ್ (ಬೆಂಗಳೂರು): ಇದ್ದಕ್ಕಿದ್ದಂತೆ ನಿಂತ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಹೋಗಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೆರಡು ಲಾರಿಗಳಿಗೂ ಬೆಂಕಿಯಿಂದ ಹಾನಿಯಾಗಿದೆ.
ನಿಂತಿದ್ದ ಸ್ಥಳದಲ್ಲೇ ಹೊತ್ತಿ ಉರಿದ ಮೂರು ಲಾರಿಗಳು.. ಪ್ರಾಣಾಪಾಯದಿಂದ ಚಾಲಕ ಪಾರು - ಲಾರಿಗಳಿಗೆ ಬೆಂಕಿ
ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮುಂಜಾನೆ ಸುಮಾರು 5 ಗಂಟೆಗೆ ಘಟನೆ ನಡೆದಿದ್ದು, ಲಾರಿಯೊಳಗೆ ಮಲಗಿದ್ದ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಮುಂಜಾನೆ ಸುಮಾರು 5 ಗಂಟೆಗೆ ಘಟನೆ ನಡೆದಿದ್ದು, ಲಾರಿಯೊಳಗೆ ಮಲಗಿದ್ದ ಚಾಲಕ ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಣ್ಣುಗಳ ತಂದಿದ್ದ ಲಾರಿಗಳು ಖಾಲಿ ಮಾಡಿ ನಿಲ್ಲಿಸಲಾಗಿತ್ತು. ಬಳಿಕ ಇದ್ದಕ್ಕಿದ್ದಂತೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಪಕ್ಕದ ಲಾರಿಗಳಿಗೂ ಹರಡಿದೆ. ಅಷ್ಟರಲ್ಲೇ ಸ್ಥಳೀಯರು ನೀರೆರಚಿ ಉಳಿದ ಎರಡು ಲಾರಿಗಳನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿದ್ದಾರೆ. ಇದಾದ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.