ಬೆಂಗಳೂರು:ಆ ಗ್ಯಾಂಗ್ಸಿನಿಮಾ ರೀತಿಯಲ್ಲಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿದರು. ಬಳಿಕ ಮನೆಯವರಿಗೆ ಕರೆ ಮಾಡಿ ದುಡ್ಡು ಕೊಡುವಂತೆ ಬೆದರಿಕೆ ಹಾಕಿದರು. ಆದ್ರೆ ಮೂರೇ ದಿನದಲ್ಲಿ ಖದೀಮರು ಸಿಕ್ಕಿ ಹಾಕಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಡುಸೊಣ್ಣೇನಹಳ್ಳಿ ಅಲೆಕ್ಸಾಂಡರ್ನನ್ನು (50) ನಿಶಾಂತ್ (25), ಸಂತೋಷ್ (24) ಮತ್ತು ನವೀನ್ (23) ಎಂಬ ಆರೋಪಿಗಳು ಕಿಡ್ನ್ಯಾಪ್ ಮಾಡಿ ಮೂರು ದಿನಗಳ ಕಾಲ ಕೋರಮಂಗಲ ಲಾಡ್ಜ್ ನಲ್ಲಿಟ್ಟಿದ್ದರು. ಬಳಿಕ ಅಲೆಕ್ಸಾಂಡರ್ ಹೆಂಡತಿ ರತ್ನಮ್ಮ ಬಳಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಓದಿ:ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಇದರಿಂದ ಕಂಗಲಾದ ರತ್ನಮ್ಮ ಆವಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು. ತಕ್ಷಣವೇ ಎತ್ತೆಚ್ಚುಕೊಂಡ ಇನ್ಸ್ಪೆಕ್ಟರ್ ಪ್ರಕಾಶ್ ಡಿ.ಆರ್ ತಂಡವನ್ನ ರಚನೆ ಮಾಡಿ ಕಾರ್ಯಾಚರಣೆಗೆ ಇಳಿಸಿದರು.
ಹಣಕ್ಕೆ ಬೇಡಿಕೆ ಇಟ್ಟು ಕರೆ ಮಾಡಿದ ಮೊಬೈಲ್ ನಂಬರ್ ಟವರ್ನ್ನು ಪರಿಶೀಲನೆ ಮಾಡಿದಾಗ ಬೆಂಗಳೂರಿನ ಕೊರಮಂಗಲದ ಲಾಡ್ಜ್ ಸ್ಥಳವನ್ನು ತೊರಿಸಿತ್ತು. ಬಳಿಕ ಹಿಂಬಾಲಿಸಿಕೊಂಡು ಹೊದ ಪೊಲೀಸರಿಗೆ ಮೂವರು ಆರೋಪಿಗಳಿಂದ ಮಾಡಿರುವ ಕೃತ್ಯ ಕಂಡುಬಂದಿತ್ತು. ನಂತರ ಆರೋಪಿಗಳನ್ನ ವಶಕ್ಕೆ ಪಡೆದು ದೂರು ದಾಖಲು ಮಾಡಿ ತನಿಖೆಯನ್ನ ಆರಂಭಿಸಿದ್ದಾರೆ.