ಬೆಂಗಳೂರು: ಕೇಂದ್ರ ಅಪರಾಧ ಶಾಖೆಯು ನಗರದಲ್ಲಿ ಮೂರು ಅಂತಾರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದು, ಒಟ್ಟು 15 ಲಕ್ಷ ರೂ.ಗಳ 200 ಗ್ರಾಂ ಎಂಡಿಎಂಎ ಹಾಗೂ 150ಗ್ರಾಂ ತೂಕದ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಡ್ರಗ್ಸ್ ಜಾಲದ ಮೇಲೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ತಂಡ ದಾಳಿ ನಡೆಸಿ ಕೇರಳ ಮೂಲದ ಮೂರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ರಮೇಶ್, ಆಶಿರ್, ಶಹಜಿನ್ ಬಂಧಿತ ಆರೋಪಿಗಳು.
ಈ ಆರೋಪಿಗಳು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲಿಸ್ ಠಾಣಾ ಸರಹದ್ದಿನ ಮೊರಿಜ್ ರೆಸ್ಟೋರೆಂಟ್ ಎದುರು ನಿಷೇಧಿತ ಮಾದಕ ವಸ್ತು ಎಂಡಿಎಂಎ ಮತ್ತು ಹ್ಯಾಶೀಸ್ ಆಯಿಲ್ ಅನ್ನು ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ,ಸಾಫ್ಟ್ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡಲು ಬಂದಿದ್ದರು.
ಬಂಧಿತ ಆರೋಪಿಗಳಿಂದ ಡ್ರಗ್ಸ್ ಜೊತೆಗೆ 3 ಮೊಬೈಲ್ ಫೋನ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.