ಕರ್ನಾಟಕ

karnataka

ETV Bharat / state

ಸಲಿಂಗ ಕಾಮಕ್ಕೆ ಒತ್ತಾಯಿಸಿದ ಗೆಳೆಯ: ಸ್ನೇಹಿತನನ್ನೇ ಕೊಚ್ಚಿ ಕೊಂದ ಆರೋಪಿಗಳು ಅಂದರ್​ - ಸಲಿಂಗ ಕಾಮ,

ಜನವರಿ 2ರ ರಾತ್ರಿ ಪಾದರಾಯನಪುರ ರೈಲ್ವೆ ಹಳಿಯ ಹತ್ತಿರ ಸ್ನೇಹಿತ ಮೊಹಮ್ಮದ್ ಅಫ್ರೋಜ್​​ನನ್ನು ಕರೆದುಕೊಂಡು ಹೋಗಿ ಆತನ ಸ್ನೇಹಿತರೇ ಕೊಲೆ ಮಾಡಿದ್ದರು. ಪ್ರಕರಣ ಮರೆಮಾಚಲು ಮೃತ ದೇಹವನ್ನು ರೈಲ್ವೆ ಹಳಿಯ ಮೇಲೆ ಮಲಗಿಸಿ ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

three-held-by-police-for-murdering-their-friend-in-bangalore
ಸ್ನೇಹಿತನನ್ನೇ ಕೊಚ್ಚಿ ಕೊಲೆ ಮಾಡಿದ್ದ ಮೂವರು ಆರೋಪಿಗಳು ಅಂದರ್​

By

Published : Mar 20, 2021, 10:51 PM IST

ಬೆಂಗಳೂರು: ನಗರದ ಪಾದರಾಯನಪುರ ರೈಲ್ವೆ ಹಳಿಯ ಬಳಿ ತನ್ನ ಸ್ನೇಹಿತನನ್ನೇ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ನಗರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಪಾದರಾಯನಪುರ ನಿವಾಸಿಗಳಾದ ಮೊಹಮ್ಮದ್ ಸಿದ್ದಿಕ್(26), ಮುಬಾರಕ್(21) ಹಾಗೂ ಖಲೀಲ್ ಅಹಮದ್(23) ಬಂಧಿತರು.

ಜನವರಿ 2ರ ರಾತ್ರಿ 10 ಗಂಟೆಯ ವೇಳೆ ಪಾದರಾಯನಪುರ ರೈಲ್ವೆ ಹಳಿಯ ಹತ್ತಿರ ಸ್ನೇಹಿತ ಮೊಹಮ್ಮದ್ ಅಫ್ರೋಜ್​​ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು. ಪ್ರಕರಣ ಮರೆಮಾಚಲು ಮೃತ ದೇಹವನ್ನು ರೈಲ್ವೆ ಹಳಿಯ ಮೇಲೆ ಮಲಗಿಸಿ ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದರು.

ಇದೀಗ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಅರೋಪಿಗಳು, ಮೃತ ಮೊಹಮ್ಮದ್ ಅಫ್ರೋಜ್ ಸ್ನೇಹಿತರಾಗಿದ್ದು, ಮೊಹಮ್ಮದ್ ತಮ್ಮನ್ನು ಸಲಿಂಗ ಕಾಮಕ್ಕೆ ಬಳಸಿಕೊಳ್ಳುತ್ತಿದ್ದನು ಹಾಗೂ ಪರಿಚಯ ಇರುವ ಯುವತಿಯರನ್ನು ಲೈಂಗಿಕತೆಗೆ ಕರೆದುಕೊಂಡು ಬರುವಂತೆ ಪೀಡಿಸುತ್ತಿದ್ದನು. ಹೀಗಾಗಿ, ಅಫ್ರೋಜ್ ನನ್ನು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ದಂಧೆ: ಮತ್ತೋರ್ವ ವಿದೇಶಿ‌ ಪ್ರಜೆಯ ಬಂಧನ

ABOUT THE AUTHOR

...view details