ಕರ್ನಾಟಕ

karnataka

ETV Bharat / state

ಮನೆ‌ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ: ಮೂವರು ಆರೋಪಿಗಳು ಅಂದರ್ - ವಿಜಯನಗರದಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್​ ಕಳ್ಳತನ

ಬೆಂಗಳೂರಲ್ಲಿ ಬಿಂದಾಸ್​ ಜೀವನ ನಡೆಸುವುದಕ್ಕಾಗಿ ಬೈಕ್​ ಕಳ್ಳತನ ಮಾಡಿ, ಅವುಗಳ ನಂಬರ್​ ಪ್ಲೇಟ್​ ಬದಲು ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

three bike thieves arrested in bengaluru
ಬೈಕ್​ ಕಳುವು ಮಾಡಿದ್ದ ಆರೋಪಿಗಳು ಪೊಲೀಸರ ವಶಕ್ಕೆ

By

Published : Nov 8, 2020, 10:38 AM IST

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಬೀವುಲ್ಲಾ, ಅಬ್ದುಲ್ ಹಫೀಜ್, ಸೈಫ್ ಹುಸೇನ್ ಬಂಧಿತ ಆರೋಪಿಗಳು. ವಿಜಯನಗರ ಆರ್.ಪಿ.ಸಿ ಲೇಔಟ್ ನಲ್ಲಿ ವಿನಯ್ ಎಂಬುವರು ಮನೆ ಮುಂದೆ ಟಿ.ಎಸ್ ಜುಪಿಟರ್ ಸ್ಕೂಟರ್ ಕೆ.ಎ: 2 - ಜೆಟಿ -4421 ವಾಹನವನ್ನು ನಿಲ್ಲಿಸಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಯ ಎದುರು ನಿಲ್ಲಿಸಿದ್ದ ಬೈಕ್​ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿನಯ್​ ದೂರು‌ ದಾಖಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್​ ಕಳ್ಳರಿಗಾಗಿ ಶೋಧ ಮಾಡಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ‌ಬಂಧಿತ ಆರೋಪಿಗಳು ಶೋಕಿ ಜೀವನಕ್ಕಾಗಿ, ಹಣ ಗಳಿಸುವ ಉದ್ದೇಶದಿಂದ ಮನೆಯ ಮುಂದೆ ನಿಲ್ಲಿಸಿದ ಬೈಕ್​ಗಳ ಹ್ಯಾಂಡಲ್ ಮುರಿದು ಕ್ಷಣಾರ್ಧದಲ್ಲಿ ಎಗರಿಸ್ತಿದ್ರು. ಸದ್ಯ ಬಂಧಿತ ಆರೋಪಿಗಳಿಂದ 2,69,000 ಬೆಲೆಬಾಳುವ ನಾಲ್ಕು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಕೆಲ ಬೈಕ್​ಗಳ ನಂಬರ್ ಪ್ಲೇಟ್ ಬದಲಿಸಿ ಬೇರೆಡೆ ಮಾರಾಟ ಮಾಡಿರುವ ವಿಚಾರ ಕೂಡ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ. ಬಂಧಿತರ ವಿರುದ್ಧ ಈ ಹಿಂದೆಯೇ ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿದೆ‌.

ABOUT THE AUTHOR

...view details