ಕರ್ನಾಟಕ

karnataka

ETV Bharat / state

ಸಾಲ ಕೊಡುವುದಾಗಿ ಖೋಟಾ ನೋಟು ತೋರಿಸಿ ವಂಚಿಸುತ್ತಿದ್ದ ಮೂವರ ಬಂಧನ - ಸಾಲ ಕೊಡುವುದಾಗಿ ಖೋಟಾ ನೋಟು ತೋರಿಸಿ ವಂಚನೆ

ಖೋಟಾ ನೋಟುಗಳನ್ನೇ ತೋರಿಸಿ ಬಲೆ ಬೀಸುತ್ತಿದ್ದ ಆರೋಪಿಗಳು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

arrested accused
ಬಂಧಿತ ಆರೋಪಿಗಳು

By

Published : Jan 6, 2023, 2:05 PM IST

Updated : Jan 6, 2023, 4:01 PM IST

ಸಿಸಿಬಿಯ ಜಂಟಿ ಆಯುಕ್ತ ಡಾ ಎಸ್ ಡಿ ಶರಣಪ್ಪ

ಬೆಂಗಳೂರು: ಖೋಟಾ ನೋಟುಗಳನ್ನು ಮುದ್ರಿಸಿ ಅವುಗಳನ್ನು ತೋರಿಸಿ ಸಾಲ ಕೊಡುವುದಾಗಿ ವಂಚಿಸುತ್ತಿದ್ದ ಮೂವರನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರಕ್ಕಾಗಿ ಸಿದ್ಧವಾಗಿದ್ದ ಮಾಜಿ ಸೈನಿಕ ಸೇರಿದಂತೆ ಮೂವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ತಮಿಳುನಾಡಿನ ತಿರುನಲ್ವೇಲಿ ಮೂಲದ ಪಿಚ್ಚು ಮುತ್ತು, ನಲ್ಲಕಣಿ ಹಾಗೂ ಮಾಜಿ ಸೈನಿಕ‌ ಸುಬ್ರಹ್ಮಣ್ಯನ್ ಬಂಧಿತರು.

ಫೈನಾಶ್ಶಿಯರ್ಸ್​ಗಳೆಂದು ಸಾಲ ಬೇಕಾಗಿರುವವರಿಗೆ ಪರಿಚಯಿಸಿಕೊಳ್ಳುತ್ತಿದ್ದ ಇವರು ದಾಖಲಾತಿ, ಸಹಿ ಎಂದು ಮೂರ್ನಾಲ್ಕು ಬಾರಿ ಭೇಟಿಯಾಗಿ ಖೋಟಾ ನೋಟುಗಳನ್ನು ಅಸಲಿಯೆಂದು ತೋರಿಸಿ ನಂಬಿಕೆ ಗಳಿಸುತ್ತಿದ್ದರು. ನಂತರ ಲೋನ್ ಅಗ್ರಿಮೆಂಟ್ ಎಂದು ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆಸಿ 1% ಪ್ರೊಸೆಸಿಂಗ್ ಶುಲ್ಕವನ್ನು ಸಹ ಪಡೆದುಕೊಳ್ಳುತ್ತಿದ್ದರು. ಬಳಿಕ ಹಣ ವರ್ಗಾವಣೆ ಮಾಡುವ ಮೊದಲೇ ಈಗಾಗಲೇ ಸಾಲ ನೀಡಿರುವಂತೆ ಪಡೆದಿರುವಂತೆ ನಕಲಿ ಅಗ್ರಿಮೆಂಟ್ ತಯಾರಿಸಿ ಸಹಿ ಪಡೆದುಕೊಳ್ಳುತ್ತಿದ್ದರು.

ನಕಲಿ ನೋಟುಗಳೊಂದಿಗೆ ಆರೋಪಿ

ಆದರೆ ನಂತರ ಯಾವುದೇ ಸಾಲ ನೀಡದೇ ಸತಾಯಿಸುತ್ತಿದ್ದರು. ಗ್ರಾಹಕರು ಒತ್ತಡ ಹೇರಲಾರಂಭಿಸಿದಾಗ ಮೊದಲೇ ಸಹಿ ಪಡೆದಿದ್ದ ಅಗ್ರಿಮೆಂಟ್ ತೋರಿಸಿ 'ಈಗಾಗಲೇ ನೀವೇ ಸಾಲ ಪಡೆದಿದ್ದೀರಾ', ಆ ಸಾಲವನ್ನು ಹಿಂತಿರುಗಿಸಿ ಎಂದು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದರು. ಆಮೇಲೆ ಅವರಿಗೆ ಇವರು ಸಾಲ ಕೊಡಲಾರದೆ ನಮಗೆ ಮೋಸ ಮಾಡಿದ್ದಾರೆ ಎಂದು ಅರಿವಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ವಂಚನೆಗೆ ಸಿದ್ಧವಾಗಿದ್ದಾಗ ದಾಳಿ ನಡೆಸಿದ ಸಿಸಿಬಿ ಪೊಲೀಸರು 1 ಕೋಟಿ 28 ಲಕ್ಷ 68 ಸಾವಿರ ಮೌಲ್ಯದ ವಿವಿಧ ಮುಖಬೆಲೆಯ ಖೋಟಾ ನೋಟುಗಳು, ಕೃತ್ಯಕ್ಕೆ ಬಳಸುತ್ತಿದ್ದ ಪ್ರಿಂಟರ್ ವಶಕ್ಕೆ ಪಡೆದಿದ್ದಾರೆ. ಸ್ಥಳ ಪರಿಶೀಲನೆ ಮತ್ತು ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದ್ದು, ಇವರದ್ದು ಮೋಸ ಮಾಡುವ ಜಾಲವೇ ಒಂದಿದೆ. ಮೂರನೇ ಆರೋಪಿ ಬಿಎಸ್​ಎಫ್ ಮಾಜಿ ಸರ್ವಿಸ್​ಮ್ಯಾನ್​ ಹಾಗೂ​ ಎರಡನೇ ಆರೋಪಿ ಮೇಲೇ ಈಗಾಗಲೇ ಐದು ಪ್ರಕರಣಗಳ ದಾಖಲಾಗಿರುವುದು ತಿಳಿದುಬಂದಿದೆ ಎಂದು ಸಿಸಿಬಿಯ ಜಂಟಿ ಆಯುಕ್ತ ಡಾ ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.

ಇತ್ತೀಚೆಗೆ ಇದೇ ರೀತಿ ಕೋಟ್ಯಾಂತರ ರುಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್​ ಪಡೆದು ನಂತರ ನಕಲಿ ನೋಟುಗಳನ್ನು ನೀಡಿ ವಂಚಿಸುತ್ತಿದ್ದ ಮನ್ನಾ ಶರಣು, ವಿಷ್ಣುರಾಜನ್ ಹಾಗೂ ಪ್ರವೀಣ್ ಎಂಬ ಮೂವರು ಆರೋಪಿಗಳನ್ನು ಬೆಂಗಳೂರಿನ ಜಯನಗರದ ಪೊಲೀಸರು ಬಂಧಿಸಿದ್ದರು. ಈ ಮೂವರು ಆರೋಪಿಗಳಿಗೂ ಈ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಶರಣಪ್ಪ ಹೇಳಿದ್ದಾರೆ.

ವಾರಗಳ ಹಿಂದೆ ಇಂತಹದೇ ಪ್ರಕರಣವೊಂದು ಬಯಲಾಗಿತ್ತು: ಮೇಲಿನ ಪ್ರಕರಣದ ಆರೋಪಿಗಳಂತೆಯೇ ರಾಮಮೂರ್ತಿ ನಗರದಲ್ಲಿ ಮನೆಗಳನ್ನು ಹೊಂದಿದ್ದ ಈ ಮೂವರು ಕೂಡ ಸಾಲ ಅಗತ್ಯವಿರುವವರು, ಬ್ಯಾಂಕ್​ ಸಾಲ ಮರಲಿ ತೀರಿಸಲು ಫೈನಾನಸ್​ ಎದುರು ನೋಡುತ್ತಿದ್ದವರನ್ನೇ ಟಾರ್ಗೆಟ್​ ಮಾಡುತ್ತಿದ್ದರು. ಸಾಲ ನೀಡುವಾಗ ಸೂಟ್​ಕೇಸ್​ನ ಮೇಲ್ಭಾಗದಲ್ಲಿ ಮಾತ್ರ ಅಸಲಿ ನೋಟುಗಳನ್ನು ಇಟ್ಟು ಒಳಭಾಗದಲ್ಲಿ ನಕಲಿ ನೋಟುಗಳನ್ನು ಇಟ್ಟು ಕೊಡುತ್ತಿದ್ದರು. ಹಣ ಸ್ವೀಕರಿಸಿದವರು ಮನೆಗೆ ಹೋಗಿ ಪರಿಶೀಲಿಸಿದಾಗ ನಿಜ ಬಯಾಲಾಗುತ್ತಿತ್ತು. ಆ ಹಣವನ್ನು ತೆಗೆದುಕೊಂಡು ಆರೋಪಿಗಳ ಬಳಿ ಬಂದು ವಿಚಾರಿಸಿದರೆ ನಾವು ಅಸಲಿ ನೋಟುಗಳನ್ನೇ ನೀಡಿದ್ದೇವೆ. ನೀವು ನಕಲಿ ನೋಟುಗಳನ್ನು ತಂದಿದ್ದೀರಿ ಎಂದು ಬೆದರಿಸಿ ಕಳುಹಿಸುತ್ತಿದ್ದರು. ಹೀಗೆ ಇವರಿಂದ ಮೋಸಹೋಗಿರುವ ಬಿಲ್ಡರ್​ ಪಾರ್ಥಸಾರಥಿ ಇವರ ವಿರುದ್ಧ ದೂರು ನೀಡಿದ್ದರು. ಮೂವರು ಆರೋಪಿಗಳನ್ನು ಬಂಧಿಸಿರುವ ಜಯನಗರ ಠಾಣಾ ಪೊಲೀಸರು ಇನ್ನುಳಿದ ಮೂವರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಸಾಲ ಕೊಡುವುದಾಗಿ ನಕಲಿ ನೋಟು ನೀಡಿ ವಂಚನೆ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ

Last Updated : Jan 6, 2023, 4:01 PM IST

ABOUT THE AUTHOR

...view details