ಆನೇಕಲ್ : ಕಳೆದ ಜು. 14ರ ರಾತ್ರಿ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಪಾದಚಾರಿ ಕೊಲೆ ಪ್ರಕರಣ ಸಂಬಂಧ ಓರ್ವ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಪೂಜಗನಪಾಳ್ಯದ ಪುಟ್ಟರಾಜು, ಚಿನ್ನಯ್ಯನಪಾಳ್ಯದ ಶ್ರೀನಿವಾಸ್ ಎಂಬುವವರೇ ಬಂಧಿತರು.
ಪಾದಚಾರಿಯ ಕೊಲೆ ಪ್ರಕರಣ :ಮೂವರು ಆರೋಪಿಗಳ ಬಂಧಿಸಿದ ಪೊಲೀಸರು : ಎಸ್ಪಿ ಶ್ಲಾಘನೆ ಅಂದು ರಾತ್ರಿ 10.45ಕ್ಕೆ ಜಿಗಣಿ ಕೈಗಾರಿಕಾ ಪ್ರದೇಶದ ಟಾಟಾ ಅಡ್ವಾನ್ಸ್ ಕಾರ್ಖಾನೆ ಎದುರು ಕಾಸರಗೋಡಿನ ಹೊಸದುರ್ಗದ ಸನು ಥಾಮ್ಸನ್ (31) ಎಂಬುವವರು ತನ್ನ ರೂಮಿಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಂದ ಕಳ್ಳರು ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ವ್ಯಕ್ತಿ ಪ್ರತಿರೋಧ ಒಡ್ಡಿದಾಗ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದರು. ಈ ಮಧ್ಯೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಪಾದಚಾರಿ ಸಾವನ್ನಪ್ಪಿದ್ದು ಜಿಗಣಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಟಾಟಾ ಅಡ್ವಾನ್ಸ್ ನಲ್ಲಿ ಉದ್ಯೋಗಿಯಾಗಿದ್ದ ಸನು ಥಾಮ್ಸನ್ ಜಿಗಣಿಯ ಎಸ್ಎಲ್ವಿ ಪಿಜಿಯಲ್ಲಿ ತಂಗಿದ್ದರು. ಇವರು ಕೊಲೆಯಾದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರ ಬಲೆ ಬೀಸಿದ್ದರು.
ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಎಸ್ಪಿ ಕೆ ವಂಶಿಕೃಷ್ಣ, ಎಎಸ್ಪಿ ಎಂಎಲ್ ಪುರುಷೋತ್ತಮ್, ಡಿವೈಎಸ್ಪಿ ಎಂ ಮಲ್ಲೇಶ್, ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ವಿ ಸುದರ್ಶನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಎಸ್ಐ ಶಿವಲಿಂಗ ನಾಯ್ಕ, ಕ್ರೈಂ ರಾಜಣ್ಣ, ಎಲ್ ರಾಜು, ಮಹೇಶ್ ಕೆ, ಷರೀಫ್ ಸಾಬ್, ಶಿವಪ್ರಕಾಶ್, ಮಹಬೂಬ್ ಶೇಕ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ :ಹೊಸಕೋಟೆಯಲ್ಲಿ ಅಪಾರ್ಟ್‌ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ