ಬೆಂಗಳೂರು: ಸಂಕಷ್ಟದ ಸಂದರ್ಭದಲ್ಲಿ ಆ್ಯಪ್ ಮೂಲಕ ಲೋನ್ ಪಡೆದುಕೊಂಡ ಯುವತಿಯೋರ್ವಳಿಗೆ ಕೆಲ ಕಿಡಿಗೇಡಿಗಳು ಕಿರುಕುಳ ನೀಡಿದ್ದು, ಸದ್ಯ ಪ್ರಕರಣ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಯುವತಿಯೋರ್ವಳು ಲೋನ್ಗಾಗಿ ಕ್ಯಾಶ್ ಬಿನ್ ಆ್ಯಪ್ ಮೂಲಕ ಅಪ್ಲೈ ಮಾಡಿದ್ದಾಳೆ. ಇನ್ನು ಆಕೆ ಖಾಸಗಿ ಬ್ಯಾಂಕ್ವೊಂದರಲ್ಲಿ ಖಾತೆ ಹೊಂದಿದ್ದು, ಹೀಗಾಗಿ ಆ ಖಾತೆಗೆ 10,800 ರೂ. ಬಂದಿದೆ. ಇನ್ನು ಅದಕ್ಕೆ ಬಡ್ಡಿ ಎಲ್ಲಾ ಸೇರಿ ಒಟ್ಟಾರೆಯಾಗಿ ಆಕೆ 12,419 ರೂ ಮರು ಪಾವತಿ ಮಾಡಬೇಕಿತ್ತು. ಈ ವಿಚಾರ ನಡೆದು ಒಂದು ವಾರ ಕಳೆದ ಬಳಿಕ ಅಪರಿಚಿತ ನಂಬರ್ನಿಂದ ಆಕೆಗೆ ಕರೆ ಬಂದಿದೆ. ಕರೆ ಮಾಡಿದ್ದ ವ್ಯಕ್ತಿ ಕ್ಯಾಶ್ ಬಿನ್ ಆ್ಯಪ್ನಿಂದ ಪಡೆದ ಹಣವನ್ನು ಮರು ಪಾವತಿಸುವಂತೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆ 3,000 ರೂ. ಗಳನ್ನು ಜಮೆ ಮಾಡಿದ್ದಾಳೆ. ಆದರೆ ಮತ್ತೆ ಕರೆ ಮಾಡಿದ ಆತ ಉಳಿದ ಹಣವನ್ನು ಪಾವತಿಸುವಂತೆ ತಿಳಿಸಿದ್ದಾನೆ.