ಕರ್ನಾಟಕ

karnataka

ETV Bharat / state

ಸುದೀಪ್​ಗೆ ಬೆದರಿಕೆ ಪತ್ರ: ಲೆಟರ್ ಪೋಸ್ಟ್‌ ಮಾಡಲು ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರು ಬಳಕೆ - etv bharata kannada

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಸ್ವಿಫ್ಟ್ ಕಾರಿನಲ್ಲಿ ಬಂದು ಸುದೀಪ್​ಗೆ ಬೆದರಿಕೆ ಪತ್ರ ಪೋಸ್ಟ್‌ ಮಾಡಿರುವುದು ಬೆಳಕಿಗೆ ಬಂದಿದೆ.

Etv Bharatthreat-letter-to-actor-kiccha-sudeep
ಸುದೀಪ್​ಗೆ ಬೆದರಿಕೆ ಪತ್ರ: ಲೆಟರ್ ಪೋಸ್ಟ್‌ ಮಾಡಲು ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರು ಬಳಕೆ

By

Published : Apr 9, 2023, 8:28 PM IST

Updated : Apr 9, 2023, 8:39 PM IST

ಬೆಂಗಳೂರು: ನಟ ಕಿಚ್ಚ ಸುದೀಪ್​ ಅವರಿಗೆ ಬೆದರಿಕೆ ಪತ್ರ ರವಾನಿಸಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಪತ್ರದ ಜಾಡು ಹುಡುಕಿ ಹೊರಟಿರುವ ಪೊಲೀಸರಿಗೆ ಕಾರೊಂದರ ಸುಳಿವು ಸಿಕ್ಕಿದೆ. ಪತ್ರವನ್ನು ದೊಮ್ಮಲೂರು ಪೋಸ್ಟ್ ಆಫೀಸ್ ಮೂಲಕ ಪೋಸ್ಟ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಸ್ವಿಫ್ಟ್ ಕಾರಿನಲ್ಲಿ ಬಂದು ಲೆಟರ್‌ ಪೋಸ್ಟ್‌ ಮಾಡಲಾಗಿದೆ.

ಸಿಸಿಟಿವಿಯಲ್ಲಿ ಕಂಡುಬಂದ ದೃಶ್ಯದಲ್ಲಿ, ಕೆಂಗೇರಿ ನಿವಾಸಿಯೊಬ್ಬರ ವಾಹನದ ನಂಬರ್ ಪತ್ತೆಯಾಗಿದೆ. ಆದರೆ ಆತನನ್ನು ವಿಚಾರಿಸಿದಾಗ ಆ ವ್ಯಕ್ತಿಗೂ ಕೃತ್ಯಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿರುವುದಾಗಿ ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.

ಮಾರ್ಚ್ 3ರಂದು ಸುದೀಪ್ ಅವ​ರ ಜೆ.ಪಿ.ನಗರದ ನಿವಾಸದ ವಿಳಾಸಕ್ಕೆ ಬಂದಿರುವ ಎರಡು ಅನಾಮಧೇಯ ಪತ್ರಗಳಲ್ಲಿ ಸುದೀಪ್ ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿತ್ತು. ಸುದೀಪ್ ಆಪ್ತ ಜಾಕ್ ಮಂಜು ಪತ್ರದ ಸಮೇತ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ:ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ

Last Updated : Apr 9, 2023, 8:39 PM IST

ABOUT THE AUTHOR

...view details