ಬೆಂಗಳೂರು: ವೋಟ್ ಮಾಡಿ ಬಂದು ಬೆರಳ ಗುರುತು ತೋರಿಸಿದ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಮತದಾರರಿಗೆ ಕುಸುಮ್ ಜನರಲ್ ಸ್ಟೋರ್ ಮಾಲೀಕರಾದ ಕೃಷ್ಣಮೂರ್ತಿ ಗಿಫ್ಟ್ ವಿತರಿಸಿದ್ದಾರೆ.
ಕನ್ನಡಾಭಿಮಾನಿಯಾಗಿರುವ ಕೃಷ್ಣ ಮೂರ್ತಿಯವರು ಅವೆನ್ಯೂ ರಸ್ತೆಯಲ್ಲಿರುವ ತಮ್ಮ ಕುಸುಮ್ ಜನರಲ್ ಸ್ಟೋರ್ ನಲ್ಲಿ ಪ್ರತೀ ವರ್ಷ ಮತದಾರರಿಗೆ ಗಿಫ್ಟ್ ಕೊಡೋ ಮೂಲಕ ಸಾಮಾಜಿಕ ಕಾಳಜಿ ಮೆರೆಯುತ್ತಿದ್ದಾರೆ. ಈ ವರ್ಷವೂ ಸಹ ಸೋಪ್, ಓ.ಆರ್.ಎಸ್ ಜ್ಯೂಸ್, ಟೂತ್ ಪೇಸ್ಟ್, ಸೊಳ್ಳೆ ಬತ್ತಿ, ನೋಟ್ ಬುಕ್ ಗಳು, ಚಾಕ್ಲೆಟ್ ಸೇರಿದಂತೆ ವಿವಿಧ ವಸ್ತಗಳ ಉಡುಗೊರೆಯಾಗಿ ನೀಡಿದ್ದಾರೆ.
ಮತದಾರರಿಗೆ ಮೂರು ಸಾವಿರಕ್ಕೂ ಹೆಚ್ಚು ಗಿಫ್ಟ್ ವಿತರಣೆ ನಿನ್ನೆಯೇ ಗಿಫ್ಟ್ ಕೊಡುತ್ತಿದ್ದರೆ ಚುನಾವಣಾ ಆಯೋಗದ ನಿಯಮ ಅಡ್ಡಿಯಾಗಬಹುದೆಂದ ಚುನಾವಣೆಯಾದ ಮರುದಿನ ಗಿಫ್ಟ್ ನೀಡಲಾಗಿದೆ. ಅರ್ಹ ನಾಗರಿಕರು ಪ್ರತಿಯೊಬ್ಬರೂ ಮತ ಚಲಾವಣೆ ಮಾಡ್ಬೇಕು. ಅದರಲ್ಲೂ ವಿದ್ಯಾವಂತರು ವೋಟ್ ಮಾಡಲೇಬೇಕು. ಮತದಾನ ಮಾಡದೇ ಸೌಲಭ್ಯ ಕೇಳುವುದು ಅಥವಾ ಸರ್ಕಾರಗಳ ಕೆಲಸಗಳನ್ನು ದೂರುವ ಹಕ್ಕಿರೋದಿಲ್ಲ ಎಂದು ಕೃಷ್ಣಮೂರ್ತಿ ತಿಳಿಸಿದ್ರು.
ಅಲ್ಲದೆ ಗಿಫ್ಟ್ ನೀಡಲು ವಸ್ತಗಳನ್ನು ನೀಡಿದ 18 ವಿವಿಧ ಕಂಪೆನಿಗಳಿಗೆ ಧನ್ಯವಾದಗಳು. ಬೆಂಗಳೂರಷ್ಟೇ ಅಲ್ಲದೆ ಮಂಡ್ಯ, ಕೋಲಾರದಿಂದ ಮತದಾರರು ಬಂದು ಗಿಫ್ಟ್ ಪಡೆದಿದ್ದಾರೆ. ಬೆಳಗ್ಗೆ 9-45 ರಿಂದ 2-30 ರ ವರೆಗೂ ಅಂಗಡಿ ತೆರೆದಿಟ್ಟು ಗಿಫ್ಟ್ ನೀಡಲಾಗಿದೆ. ಜನ ಕ್ಯೂ ನಿಂತು ಗಿಪ್ಟ್ ಪಡೆದುಕೊಂಡಿದ್ದಾರೆ. ಗಿಪ್ಟ್ ನೀಡುವ ಮೂಲಕವಾದ್ರೂ ಒಂದು ಪರ್ಸೆಂಟ್ ವೋಟ್ ಹೆಚ್ಚಾಗಬಹುದು ಎಂದುಕೊಂಡಿದ್ದೇನೆ ಎಂಬುದು ಕೃಷ್ಣಮೂರ್ತಿಯವರ ಮಾತು.