ಕರ್ನಾಟಕ

karnataka

ETV Bharat / state

Black fungus: ಸಾವಿರ ಗಡಿಯತ್ತ ಕಪ್ಪು ಶಿಲೀಂಧ್ರ ಪ್ರಕರಣ... ರಾಜ್ಯದಲ್ಲಿ ಔಷಧಿ ಕೊರತೆ - ಬ್ಲ್ಯಾಕ್‌ ಫಂಗಸ್ ಪ್ರಕರಣ

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಪರ್ಯಾಯ ಔಷಧಿಗೂ ಪರದಾಟ ಶುರುವಾಗಿದೆ. ಲೈಪೋಸೋಮಲ್ ಅಂಪೊಟೆರಿಸಿನ್‌ ಬಿ ಇಂಜೆಕ್ಷನ್​​ಗೆ ದೊಡ್ಡಮಟ್ಟದಲ್ಲಿ ಹಾಹಾಕಾರ ಶುರುವಾಗಿತ್ತು. ಓಪನ್ ಮಾರ್ಕೆಟ್​​ನಲ್ಲೂ ಲಭ್ಯತೆ ಇರಲಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಅಂಪೊಟೆರಿಸಿನ್‌ ಬಿಯನ್ನು ರಾಜ್ಯಗಳಿಗೆ ಅಗತ್ಯಕ್ಕನುಗುಣವಾಗಿ ಹಂಚಿಕೆ ಮಾಡುತ್ತಿದೆ.

Black Fungus
ಬ್ಲ್ಯಾಕ್‌ ಫಂಗಸ್

By

Published : May 28, 2021, 10:57 AM IST

ಬೆಂಗಳೂರು:ರಾಜ್ಯದಲ್ಲಿ ಸದ್ದಿಲ್ಲದೇ ಬ್ಲ್ಯಾಕ್‌ ಫಂಗಸ್ ಪ್ರಕರಣ ಸಾವಿರದ ಗಡಿಯತ್ತ ಸಾಗುತ್ತಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪತ್ತೆಯಾಗುತ್ತಿರುವ ಈ ಫಂಗಸ್​ ರಾಜ್ಯದಲ್ಲಿ ಒಟ್ಟು 927 ಮಂದಿಯಲ್ಲಿ ಕಾಣಿಸಿದೆ. 897 ಬ್ಲ್ಯಾಕ್​ ಫಂಗಸ್ ರೋಗಿಗಳಿಗೆ ಚಿಕಿತ್ಸೆ ‌ನಡೆಯುತ್ತಿದೆ. 17 ಮಂದಿ ಗುಣಮುಖರಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್ ಪ್ರಕರಣಗಳ ವಿವರ

ಬ್ಲ್ಯಾಕ್ ಫಂಗಸ್ ರೋಗಿಗಳ ಪರದಾಟ: ಮತ್ತೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಪರ್ಯಾಯ ಔಷಧಿಗೂ ಪರದಾಟ ಶುರುವಾಗಿದೆ. ಲೈಪೋಸೋಮಲ್ ಅಂಪೊಟೆರಿಸಿನ್‌ ಬಿ ಇಂಜೆಕ್ಷನ್​ಗೆ ದೊಡ್ಡಮಟ್ಟದಲ್ಲಿ ಹಾಹಾಕಾರ ಶುರುವಾಗಿತ್ತು. ಓಪನ್ ಮಾರ್ಕೆಟ್​​ನಲ್ಲೂ ಲಭ್ಯತೆ ಇರಲಿಲ್ಲ, ಹಾಗಾಗಿ ಕೇಂದ್ರ ಸರ್ಕಾರ ಅಂಪೊಟೆರಿಸಿನ್‌ ಬಿಯನ್ನು ರಾಜ್ಯಗಳಿಗೆ ಅಗತ್ಯಕ್ಕನುಗುಣವಾಗಿ ಹಂಚಿಕೆ ಮಾಡುತ್ತಿದೆ. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಬಳಿ ಇಪ್ಪತ್ತು ಸಾವಿರ ವೈಯಲ್​ಗಳಿಗಾಗಿ ಮನವಿ ಮಾಡಿಕೊಂಡಿತ್ತು. ಆದರೆ ಈಗ ಹಂತ ಹಂತವಾಗಿ ಬಿಡುಗಡೆ ಮಾಡಲಿದ್ದು, ಸದ್ಯ ರಾಜ್ಯಕ್ಕೆ ಹತ್ತು ಸಾವಿರ ವೈಯಲ್ಸ್ ಸಿಕ್ಕಿದೆ. ಇನ್ನೂ ಹೆಚ್ಚುವರಿಯಾಗಿ ಹತ್ತು ಸಾವಿರ ವೈಯಲ್ಸ್ ಪೂರೈಕೆಯಾಗಬೇಕಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಫಲಕಾರಿಯಾಗುವಂತಹ ಏಕೈಕ ಔಷಧ ಆ್ಯಂಪೋಟೇರಿಸಿನ್ ಬಿ. ಆದರೆ ಅದಕ್ಕೆ ಹಾಹಾಕಾರ ಜಾಸ್ತಿಯಾಗಿತ್ತು ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಕೊಡುತ್ತಿರುವ ವೈಯಲ್ಸ್ ಸಂಖ್ಯೆ ತೀರಾ ಕಡಿಮೆ ಇದೆ.

ಹಾಗಾಗಿ ಅದಕ್ಕೆ ಪರ್ಯಾಯ ಔಷಧ ಅಂತ ಇದ್ದರೆ ಅದು ಇಸಾವುಕೋನಾಜೋಲ್ ಮತ್ತು ಪೋಸಾಕೋನಾಜೋಲ್ (ISAVUCONAZOLE-POSACONAZOLE). ಈ ಎರಡು ಔಷಧವನ್ನು ಪರ್ಯಾಯವಾಗಿ ವೈದ್ಯರು ನೀಡುತ್ತಿದ್ದರು‌. ಯಾವಾಗ ಆ್ಯಂಪೋಟೇರಿಸಿನ್ ಬಿ ಔಷಧಕ್ಕೆ ಪರ್ಯಾಯ ಔಷಧ ಇದೆ ಅಂತ ಗೊತ್ತಾಯ್ತೋ ಈ ಎರಡು ಔಷಧಿಗಳು ಕೂಡ ಕರ್ನಾಟಕದಲ್ಲಿ ಸಿಗುತ್ತಿಲ್ಲ. ‌ಇತ್ತ ಓಪನ್ ಮಾರ್ಕೆಟ್​​ನಲ್ಲೂ ಸಿಗುತ್ತಿಲ್ಲ. ಡಿಸ್ಟ್ರಿಬ್ಯೂಟರ್​​​ ಮತ್ತು ಮೆಡಿಕಲ್ ಶಾಪ್​​ಗಳಲ್ಲೂ ಲಭ್ಯವಿಲ್ಲ.‌ ಹಾಗಾಗಿ ಈಗ ಮತ್ತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಡೆ ಮುಖ ಮಾಡುವಂತಾಗಿದೆ. ಕೆಪಿಎಂಎ ಪೋರ್ಟಲ್​​ನಲ್ಲಿ ಆ್ಯಂಪೋಟೇರಿಸಿನ್ ಬಿ ಜೊತೆಗೆ ಈ ಎರಡು ಔಷಧಕ್ಕಾಗಿ ರೋಗಿಯ ಮಾಹಿತಿ ನೀಡಿ ಮನವಿ ಮಾಡಬೇಕಿದೆ. ಆದರೆ ರಾಜ್ಯದಲ್ಲಿ ಪೂರೈಕೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ಇದರಿಂದ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಂಜೀವಿನಿ ರೀತಿಯಲ್ಲಿ ಕಾಣಿಸಿಕೊಂಡಿದ್ದ ಈ ಎರಡು ಪರ್ಯಾಯ ಔಷಧಗಳಿಗೂ ಕೊರತೆ ಶುರುವಾಗಿದೆ.

ABOUT THE AUTHOR

...view details