ಬೆಂಗಳೂರು: ಹೋಮ್ ಐಸೋಲೇಷನ್ನಲ್ಲಿದ್ದಕೋವಿಡ್ ಸೋಂಕಿತರಿಗೆ ಸರ್ಕಾರ ನೀಡಿದ ಆಕ್ಸಿ ಮೀಟರ್ ಅನ್ನು ಹತ್ತು ದಿನಗಳ ನಂತರ ವಾಪಸ್ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ.
ಹೋಂ ಐಸೋಲೇಷನ್ ಇದ್ದವರಿಂದ ಆಕ್ಸಿ ಮೀಟರ್ ಹಿಂಪಡೆಯಲು ಚಿಂತನೆ!
ಆಕ್ಸಿ ಮೀಟರ್ ಹಂಚಿಕೆ ಮಾಡಿದ 10 ದಿನಗಳ ನಂತರ ಹಿಂಪಡೆದು ಮರುಬಳಕೆ ಮಾಡುವ ಕುರಿತು ಚಿಂತನೆ ನಡೆದಿದೆ. ಈ ಸಂಬಂಧ ಕೋವಿಡ್-19 ಕಾರ್ಯಪಡೆ ಸಮಿತಿ ಸಭೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ನಿತ್ಯ ರಾಜ್ಯದಲ್ಲಿ ಸರಾಸರಿ 40,000 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿತ್ತು. ಇದರಲ್ಲಿ ಶೇ 70 ರಷ್ಟು ಯಾವುದೇ ಗುಣಲಕ್ಷಣವಿಲ್ಲದ ಹಾಗೂ ಸೌಮ್ಯ ಲಕ್ಷಣ ಪ್ರಕರಣಗಳಾಗಿದ್ದವು. ಹೀಗಾಗಿ ಗೃಹ ಆರೈಕೆಯಲ್ಲಿದ್ದವರಿಗೆ, ರಕ್ತದಲ್ಲಿನ ಆಮ್ಲಜನಕ 95ಕ್ಕಿಂತ ಕಡಿಮೆಯಾದಲ್ಲಿ ಅಂತಹವರನ್ನು ಮುಂದಿನ ಚಿಕಿತ್ಸೆಗೆ ಗುರುತಿಸಲು ಪಲ್ಸ್ ಆಕ್ಸಿ ಮೀಟರ್ ನೀಡಲಾಗಿತ್ತು. ಇದಕ್ಕಾಗಿ ಮೊದಲನೇ ಹಂತದಲ್ಲಿ ಒಂದು ಲಕ್ಷ ಆಕ್ಸಿ ಮೀಟರ್ ಹಾಗೂ ಎರಡನೇ ಹಂತದಲ್ಲಿ ಒಂದು ಲಕ್ಷ ಆಕ್ಸಿ ಮೀಟರ್ ಖರೀದಿಸಲಾಗಿತ್ತು.
ಸಾಮಾನ್ಯವಾಗಿ 10 ದಿನದ ನಂತರ ಕೋವಿಡ್-19 ಸೋಂಕು ತೀವ್ರ ಸ್ವರೂಪಕ್ಕೆ ತಿರುಗದಿದ್ದರೆ, ಸೋಂಕಿನಿಂದ ಗುಣಮುಖ ಆದಹಾಗೆ. ಈ ಕಾರಣದಿಂದ ಆಕ್ಸಿ ಮೀಟರ್ ಹಂಚಿಕೆ ಮಾಡಿದ 10 ದಿನಗಳ ನಂತರ ಹಿಂಪಡೆದು ಮರುಬಳಕೆ ಮಾಡುವ ಕುರಿತು ಚಿಂತನೆ ನಡೆದಿದೆ. ಈ ಸಂಬಂಧ ಕೋವಿಡ್-19 ಕಾರ್ಯಪಡೆ ಸಮಿತಿ ಸಭೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.