ಕರ್ನಾಟಕ

karnataka

ಎಚ್ಚರಿಕೆ: ಬೆಂಗಳೂರಲ್ಲಿ ಮಾಸ್ಕ್ ಹಾಕದವರಿಗೆ ಇಂದಿನಿಂದ ಪೊಲೀಸರಿಂದಲೂ ದಂಡ

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಎಲ್ಲೆಡೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದರೂ ಕೆಲವರು ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಪೊಲೀಸರು ಇಂದಿನಿಂದ ನಿಯಮ ಮೀರಿದವರಿಗೆ ದಂಡ ವಿಧಿಸಲಿದ್ದಾರೆ.

By

Published : Oct 7, 2020, 7:57 AM IST

Published : Oct 7, 2020, 7:57 AM IST

dsd
ಮಾಸ್ಕ್ ಹಾಕದವರಿಗೆ ಇಂದಿನಿಂದ ಪೊಲೀಸರಿಂದಲೂ ದಂಡ

ಬೆಂಗಳೂರು: ಮಾಸ್ಕ್​ ಹಾಕದೆ ಬೇಕಾಬಿಟ್ಟಿ ಸುತ್ತಾಡುವ ಸಾರ್ವಜನಿಕರಿಗೆ ಇಂದಿನಿಂದ ಪೊಲೀಸರು ಬಿಸಿ ಮುಟ್ಟಿಸಲಿದ್ದು, ದಂಡ ವಸೂಲಿಗಿಳಿಯಲಿದ್ದಾರೆ.

ಕೆಲ ಮಂದಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಇಲ್ಲದೆ ಓಡಾಡಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈಗಾಗಲೇ ಮಾರ್ಷಲ್​ಗಳು ಎಲ್ಲೆಡೆ ಮಾಸ್ಕ್ ಹಾಕದವರಿಗೆ ಫೈನ್ ಹಾಕುತ್ತಿದ್ದು, ಇಂದಿನಿಂದ ಟ್ರಾಫಿಕ್ ಪೊಲೀಸರು ಸಹ ಮಾಸ್ಕ್ ಹಾಕದವರಿಗೆ ಫೈನ್ ಹಾಕಲಿದ್ದಾರೆ.

ಇದುವರೆಗೂ ಬಿಬಿಎಂಪಿ‌ ಮಾರ್ಷಲ್​ಗಳು ಮಾತ್ರ ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಇದೀಗ ನಗರದ ಎಲ್ಲಾ ವಿಭಾಗದ ಪೊಲೀಸ್ ಠಾಣೆಗಳಿಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​ ಸುತ್ತೋಲೆ ಹಿನ್ನೆಲೆ ಇಂದಿನಿಂದ ಪೊಲೀಸರು ಅಲರ್ಟ್ ಆಗಲಿದ್ದಾರೆ. ನಿಯಮ ಮೀರಿದವರಿಗೆ ದಂಡ ವಿಧಿಸಿದಾಗ ಕಿರಿಕಿರಿ ಮಾಡಿದರೆ ಎನ್​ಡಿಪಿಎಸ್ ಕಾಯ್ದೆಯಡಿ ಕೇಸ್ ಬುಕ್ ಮಾಡಲಿದ್ದಾರೆ. ಈ ಕೇಸ್ ಬುಕ್ ಆದ್ರೆ ಕೋರ್ಟ್ ಅಲೆಯುವುದು ಅನಿವಾರ್ಯವಾಗಿದೆ.

ABOUT THE AUTHOR

...view details