ಕರ್ನಾಟಕ

karnataka

ETV Bharat / state

ರಾಜ್ಯದ ಜಿಡಿಪಿ ಭಾರಿ ಪ್ರಮಾಣದಲ್ಲಿ ಕುಸಿಯುವ ಆತಂಕ.. ಕಳವಳ ವ್ಯಕ್ತಪಡಿಸಿದ ಆರ್ಥಿಕ ಇಲಾಖೆ! - ಕರ್ನಾಟಕ ಜಿಡಿಪಿ ಕುಸಿತ,

ರಾಜ್ಯದ ಜಿಡಿಪಿ ಭಾರಿ ಕುಸಿಯುವ ಆತಂಕ ಎದುರಾಗಿದ್ದು, ಆರ್ಥಿಕ ಇಲಾಖೆ ಕಳವಳ ವ್ಯಕ್ತಪಡಿಸಿದೆ.

GDP down, This year GDP down, This year GDP down in Karnataka state, Karnataka GDP down, Karnataka GDP down news, ಜಿಡಿಪಿ ಕುಸಿತ, ಈ ವರ್ಷ ಜಿಡಿಪಿ ಕುಸಿತ, ಕರ್ನಾಟಕ ರಾಜ್ಯದಲ್ಲಿ ಈ ವರ್ಷ ಜಿಡಿಪಿ ಕುಸಿತ, ಕರ್ನಾಟಕ ಜಿಡಿಪಿ ಕುಸಿತ, ಕರ್ನಾಟಕ ಜಿಡಿಪಿ ಕುಸಿತ ಸುದ್ದಿ,
ರಾಜ್ಯ ಜಿಡಿಪಿಯ ವರ್ಷವಾರು ಕುಸಿತ ಹೇಗಿದೆ ನೋಡಿ

By

Published : Jan 11, 2021, 7:36 AM IST

ಬೆಂಗಳೂರು:ಕೊರೊನಾ ಲಾಕ್‌ಡೌನ್​ನಿಂದ ರಾಜ್ಯದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತ ರಾಜ್ಯದ ಜಿಡಿಪಿ ಕೂಡ ಈ ಆರ್ಥಿಕ ವರ್ಷದಲ್ಲಿ ಭಾರೀ ಕುಸಿತ ಕಾಣುವ ಆತಂಕ ಎದುರಾಗಿದೆ.

ಕೊರೊನಾ ಲಾಕ್‌ಡೌನ್ ರಾಜ್ಯದ ಆರ್ಥಿಕತೆ ಮೇಲೆ ಹಿಂದೆಂದೂ ಕಾಣದಷ್ಟು ಆಘಾತ ನೀಡಿದೆ. ಎಲ್ಲ ಆರ್ಥಿಕ ಚಟುವಟಿಕೆ ಸ್ಥಗಿತವಾಗಿದ್ದರಿಂದ ರಾಜ್ಯದ ಆರ್ಥಿಕತೆ ಮೇಲೆ ಭಾರಿ ಹೊಡೆತ ನೀಡಿದೆ.

ಇದರಿಂದ ರಾಜ್ಯದ ಜಿಡಿಪಿ ಕೂಡ ಕುಸಿತ ಕಾಣುವ ಸಾಧ್ಯತೆಗಳಿವೆ. ಈಗಾಗಲೇ ರಾಷ್ಟ್ರದ ಜಿಡಿಪಿ ತೀವ್ರ ಕುಸಿತ ಕಂಡಿದೆ. ಅದರ ಪರಿಣಾಮ ರಾಜ್ಯದ ಮೇಲೂ ಬೀರಿದೆ. ರಾಜ್ಯದ ಜಿಡಿಪಿಯನ್ನು‌ ಆರ್ಥಿಕ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲಾಗುತ್ತದೆ.‌ ಲಾಕ್‌ಡೌನ್​ನಿಂದಾಗಿರುವ ಆರ್ಥಿಕ ಹಿಂಜರಿಕೆಯಿಂದ ಈ ಬಾರಿ ರಾಜ್ಯದ ಜಿಡಿಪಿ ಭಾರಿ ಕುಸಿತ ಕಾಣಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷದಲ್ಲಿನ ಜಿಡಿಪಿ ಸ್ಥಿತಿಗತಿ ಹೇಗಿದೆ?:

ರಾಜ್ಯ ಯೋಜನಾ ಮಂಡಳಿ ನೀಡಿರುವ ಅಂಕಿ - ಅಂಶದ ಪ್ರಕಾರ 2019-20ರಲ್ಲಿ ರಾಜ್ಯದ ಜಿಡಿಪಿ ಶೇ 6.0ರಷ್ಟು ಇತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಜಿಡಿಪಿ ಅಲ್ಪ ಕುಸಿತ ಕಂಡಿತ್ತು.

2018-19ರಲ್ಲಿ ರಾಜ್ಯದ ಜಿಡಿಪಿ ಶೇ 6.7ರಷ್ಟು ಇತ್ತು. ಅದೇ 2017-18ರಲ್ಲಿ ರಾಜ್ಯದ ಜಿಡಿಪಿ ಶೇ 8.6ರಷ್ಟು ದಾಖಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಜಿಡಿಪಿ ಕುಸಿತ ಕಾಣುತ್ತಿದೆ. ಅದೇ ಈ ಆರ್ಥಿಕ ವರ್ಷದಲ್ಲಿ ಜಿಡಿಪಿ ಸ್ಥಿತಿ ಇನ್ನೂ ಅದೋಗತಿಗೆ ಹೋಗುವ ಆತಂಕ ಇದೆ. ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ಸುಮಾರು ಶೇ 2-3ರಷ್ಟು ಕುಸಿತ ಕಾಣುವ ಆತಂಕ ವ್ಯಕ್ತಪಡಿಸಿದ್ದಾರೆ.

2017-18ರಲ್ಲಿ ರಾಜ್ಯದ ಕೃಷಿ ವಲಯದ ಜಿಡಿಪಿ ಶೇ 22.0ರಷ್ಟು ದಾಖಲಿಸಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ, 2018-19ರಲ್ಲಿ ತೀವ್ರ ಬರ ಎದುರಾದ ಹಿನ್ನೆಲೆ ಕೃಷಿ ವಲಯದ ಜಿಡಿಪಿ -ಶೇ 3.6ರಷ್ಟು ತೀವ್ರ ಕುಸಿತ ಕಂಡಿತ್ತು. 2019-20ಕ್ಕೆ ಕೃಷಿ ವಲಯದ ಜಿಡಿಪಿ ಶೇ 3.8ರಷ್ಟಕ್ಕೆ ಚೇತರಿಕೆ ಕಂಡಿತ್ತು. ಈ ಜಿಡಿಪಿಯನ್ನು ಶೇ 5ರಷ್ಟಕ್ಕೆ ಏರಿಸುವ ಗುರಿ ಸರ್ಕಾರದ್ದಾಗಿದೆ. ಲಾಕ್ ಡೌನ್ ಇದ್ದರೂ ಈ ಬಾರಿ ಕೃಷಿ ಉತ್ಪನ್ನದಲ್ಲಿ ಏರಿಕೆ ಕಂಡಿರುವುದರಿಂದ ಕೃಷಿ ವಲಯದ ಜಿಡಿಪಿಯಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯದ ಕೈಗಾರಿಕಾ ವಲಯದ ಜಿಡಿಪಿ 2017-18ರಲ್ಲಿ ಶೇ 2.7ರಷ್ಟಿತ್ತು. 2018-19ರಲ್ಲಿ ಅದು ಶೇ 4.8ಕ್ಕೆ ಚೇತರಿಕೆ ಕಂಡಿತ್ತು. ಅದೇ 2019-20ರಲ್ಲಿ ಕೈಗಾರಿಕಾ ವಲಯದ ಜಿಡಿಪಿ ಶೇ 6.3ರಷ್ಟಕ್ಕೆ ಏರಿಕೆ ಕಂಡಿತ್ತು. ಆದರೆ, ಈ ವರ್ಷ ಲಾಕ್‌ಡೌನ್ ಹಿನ್ನೆಲೆ ಕೈಗಾರಿಕಾ ಚಟುವಟಿಕೆ ಮೇಲೆ ಭಾರಿ ಏಟು ಬಿದ್ದ ಹಿನ್ನೆಲೆ ಜಿಡಿಪಿಯಲ್ಲಿ ತೀವ್ರ ಇಳಿಕೆ ಕಾಣುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ಸೇವಾ ವಲಯದಲ್ಲಿ 2017-18ರಲ್ಲಿ ರಾಜ್ಯದ ಜಿಡಿಪಿ ಶೇ 6.6ರಷ್ಟು ಇತ್ತು. 2018-19ರಲ್ಲಿ ಅದು ಶೇ 9.0ರಷ್ಟು ಏರಿಕೆ ಕಂಡಿತ್ತು. 2019-20ರಲ್ಲಿ ಸೇವಾ ವಲಯದ ಜಿಡಿಪಿ ಶೇ 6.4ಕ್ಕೆ ಇಳಿಕೆ ಕಂಡಿತ್ತು. ಈ ಆರ್ಥಿಕ ವರ್ಷದಲ್ಲಿ ಈ ಜಿಡಿಪಿ ಇನ್ನಷ್ಟು ಕುಸಿತ ಕಾಣಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಜಿಡಿಪಿ ಕುಸಿತ ಈ ಬಾರಿ ಬಹುತೇಕ ಖಚಿತವಾಗಿರುವುದರಿಂದ ನಮ್ಮ ವೈಯಕ್ತಿಯ ಹಣಕಾಸು ಸ್ಥಿತಿಗತಿಯನ್ನೇ ಮತ್ತಷ್ಟು ಬುಡಮೇಲು ಮಾಡಲಿದೆ. ಹಣದುಬ್ಬರ ಹೆಚ್ಚುವಿಕೆ, ಗ್ರಾಹಕ ವಸ್ತುಗಳು ದುಬಾರಿಯಾಗುವಿಕೆ, ಉದ್ಯೋಗಗಳ ಸಂಖ್ಯೆಯಲ್ಲಿ ತೀವ್ರ ಕುಸಿತದ ಆತಂಕ ಎದುರಾಗಿದೆ.

ABOUT THE AUTHOR

...view details