ಕರ್ನಾಟಕ

karnataka

ETV Bharat / state

ಸಾರ್ವತ್ರಿಕ ವರ್ಗಾವಣೆಗೆ ಕಡಿವಾಣ: ಶೇ 2‌ ಕ್ಕಿಳಿಸಿ ಸರ್ಕಾರ ಆದೇಶ - kannada news

2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ.2ಕ್ಕೆ ಸೀಮಿತಗೊಳಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ , 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.2ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ವರ್ಗಾವಣೆ ಮಿತಿ ಶೇ.2‌ ಮೀರುವಂತಿಲ್ಲ

By

Published : Jun 1, 2019, 10:46 PM IST

ಬೆಂಗಳೂರು: 2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ.2ಕ್ಕೆ ಸೀಮಿತಗೊಳಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.2ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ಜೊತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆಯನ್ನು ಶೇ.4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಎಲ್ಲ‌ಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

For All Latest Updates

ABOUT THE AUTHOR

...view details