ಕರ್ನಾಟಕ

karnataka

ETV Bharat / state

ಅಬ್ಬಬ್ಬಾ,, ಮೂರನೇ ದಿನ ಬರೋಬ್ಬರಿ 230 ಕೋಟಿ ರೂ. ಮೌಲ್ಯದ ಮದ್ಯ ಸೇಲ್‌!! - liquor sales in Karnataka

ಸರ್ಕಾರ ಶಾಕ್​ ಮೇಲೆ ಶಾಕ್​ ಕೊಟ್ಟರು ಮದ್ಯಪ್ರಿಯರು ಮಾತ್ರ ತಲೆಕೆಡಿಸಿಕೊಂಡಿಲ್ಲ. ಇಂದು ಸಹ ಮದ್ಯಪ್ರಿಯರು ತಮಗಿಷ್ಟ ಬಂದಂತೆ ಮದ್ಯ ಕೊಳ್ಳುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಇದರ ಸಂಪೂರ್ಣ ಅಂಕಿ-ಅಂಶ ಇಲ್ಲಿದೆ.

Third day sees record liquor sales of Rs 230 crore in Karnataka
ಸಂಗ್ರಹ ಚಿತ್ರ

By

Published : May 6, 2020, 8:51 PM IST

ಬೆಂಗಳೂರು :ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕು ಮೂರು ದಿನ ಕಳೆದರೂ ಎಣ್ಣೆ ಖರೀದಿಸುವವರ ಸಂಖ್ಯೆ ಕಡಿಮೆಯೇನಾಗಿಲ್ಲ. ಇಂದೂ ಸಹ ಕರ್ನಾಟಕ ಪಾನೀಯ ನಿಯಮ (ಕೆಎಸ್ ಬಿಸಿಎಲ್) ಬರೋಬ್ಬರಿ 230 ಕೋಟಿ ರೂ. ಮದ್ಯ ಸೇಲ್‌ ಮಾಡಿದೆ.

ಇದನ್ನೂ ಓದಿ: ವ್ಯಕ್ತಿಯಿಂದ ಊಹೆಗೂ ಮೀರಿದ ಮದ್ಯ ಖರೀದಿ: ಸೋಷಿಯಲ್​ ಮೀಡಿಯಾದಲ್ಲಿ ಬಿಲ್​​​ ವೈರಲ್​! ​

ನಿನ್ನೆಯ ದಾಖಲೆ ಮುರಿದು ಮದ್ಯವನ್ನು ಬಾರ್ ಮಾಲೀಕರು ಮದ್ಯ ಖರೀದಿ ಮಾಡಿದ್ದಾರೆ. ನಿನ್ನೆ ಒಂದೇ ದಿನ 197 ಕೋಟಿ ರೂ.ಅಷ್ಟು ಮದ್ಯ ಖರೀದಿ ಮಾಡಲಾಗಿತ್ತು. ಇಂದು 230 ಕೋಟಿ ರೂ.ನಷ್ಟು ಮದ್ಯ ಖರೀದಿ ಮಾಡಲಾಗಿದೆ. ಇಂದು 15.6 ಕೋಟಿ ರೂ. ಮೌಲ್ಯದ 7 ಲಕ್ಷ ಲೀಟರ್ ಬಿಯರ್, ಅದೇ ರೀತಿ 216 ಕೋಟಿ ರೂ. ಮೌಲ್ಯದ 39 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮಾರಾಟವಾಗಿದೆ.

ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ ಮೇ 4 ರಂದು ಬರೋಬ್ಬರಿ 45 ಕೋಟಿ ರೂ. ಹಾಗೂ 2 ನೇ ದಿನ ಮೇ, 5 ರಂದು 197 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಎರಡು ದಿನದ ಮದ್ಯ ಮಾರಾಟಕ್ಕಿಂತ ಇಂದು ಹೆಚ್ಚು ಮದ್ಯ ಮಾರಾಟವಾಗಿದೆ.

ಅಲ್ಲದೇ ನಿನ್ನೆಯ ದಾಖಲೆಯನ್ನು ಮುರಿದು ಮದ್ಯದಂಗಡಿಗಳು 230 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿವೆ. ನಿನ್ನೆ ಕೆಎಸ್‍ಬಿಸಿಎಲ್​ನಿಂದ 2.50 ಕೋಟಿ ರೂ. ಮೌಲ್ಯದ 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನಕ್ಕೆ ಕಿಕ್​ ತರುವ ಆದಾಯವನ್ನೇ ಕೊಟ್ಟ ’ಗುಂಡು’ಗಲಿಗಳು!

ಇದೀಗ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಮೊತ್ತೊಂದು ಶಾಕ್ ನೀಡಿದೆ. ಮದ್ಯದ ಮೇಲೆ ಶೇ. 17ರಷ್ಟು ತೆರಿಗೆ ಹೆಚ್ಚಳ ಮಾಡಿದೆ. ಮದ್ಯದ ದರ ಎಷ್ಟೇ ಆದರೂ ತಲೆಕೆಡಿಸಿಕೊಳ್ಳದ ಮದ್ಯ ಪ್ರಿಯರು ಮಾತ್ರ ಮದ್ಯದಂಗಡಿಗಳ ಬಳಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.

ABOUT THE AUTHOR

...view details