ಕರ್ನಾಟಕ

karnataka

ETV Bharat / state

ಎಸ್​ಡಿಪಿಐಗೆ ಬ್ಯಾನ್​ ಭೀತಿ.. ಈ ಕುರಿತು ಬೆಂ.ನಗರ ಪೊಲೀಸ್​ ಆಯುಕ್ತರು ಹೇಳೋದೇನು? - SDPI Organization Latest News

ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್​ ಆಯುಕ್ತ ಭಾಸ್ಕರ ರಾವ್‌ ತೀರ್ಮಾನ ಕೈಗೊಂಡಿದ್ದಾರೆ.

thinking-of-banning-sdpi-organization
ಎಸ್​ಡಿಪಿಐ ಗೆ ಬ್ಯಾನ್​ ಆಗುವ ಭೀತಿ..!

By

Published : Jan 17, 2020, 9:05 PM IST

ಬೆಂಗಳೂರು:ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್​ ಆಯುಕ್ತ ಭಾಸ್ಕರ ರಾವ್​ ತೀರ್ಮಾನ ಕೈಗೊಂಡಿದ್ದಾರೆ.

ಎಸ್​ಡಿಪಿಐ ಸಂಘಟನೆ ಬಹಳ ಆ್ಯಕ್ಟೀವ್​ ಆಗಿದ್ದು, ಸಂಘಟನೆಯನ್ನು ಬ್ಯಾನ್​ ಮಾಡುವ ಕುರಿತಾಗಿ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್​ಡಿಪಿಐ ಸಂಘಟನೆ ಭಾಗಿಯಾಗಿರೋದು ಆರೋಪವಿದ್ದು, ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್​ಡಿಪಿಐ ಕಾರ್ತಕರ್ತರಾಗಿದ್ದಾರೆ. ಇವರನ್ನ ವಿಚಾರಣೆ ನಡೆಸಿದಾಗ ಇವರ ವೈಯಕ್ತಿಕ ಖರ್ಚಿಗೆ ಹತ್ತು ಸಾವಿರ ಹಣವನ್ನ ಎಸ್​ಡಿಪಿಐ ಮುಖಂಡರು ನೀಡ್ತಿದ್ದ ವಿಚಾರ ಕೂಡ ಬಯಲಾಗಿದೆ.

ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು‌ ಗಣರಾಜ್ಯೋತ್ಸವ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡಿಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ಎಸ್​ಡಿಪಿಐಗೆ ಬ್ಯಾನ್‌ ಭೀತಿ.. ಬೆಂ.ನಗರ ಪೊಲೀಸ್ ಆಯುಕ್ತರು ಹೇಳೋದೇನು?

ABOUT THE AUTHOR

...view details