ಕರ್ನಾಟಕ

karnataka

ಬ್ರೈಲ್ ಸೆಂಟರ್ ಸ್ಥಳಾಂತರಿಸುವ ಬಗ್ಗೆ ಚಿಂತನೆ: ಬೆಂಗಳೂರು ವಿವಿ ಕುಲಪತಿ

By

Published : Jul 21, 2019, 1:29 AM IST

ಬೆಂಗಳೂರಿನ ‌ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬ್ರೈನ್​​ ರಿಸೋರ್ಸ್​ ಸೆಂಟರ್​​ನಿಂದ 'ಉದ್ಯೋಗಾವಕಾಶದ ಬಗ್ಗೆ ಜಾಗೃತಿ' ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಹಾಗೂ ವಿಷೇಶಚೇತನ ಮಕ್ಕಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬಿದರು.

ಕಾರ್ಯಕ್ರಮದ ಉದ್ಘಾಟನೆ

ಬೆಂಗಳೂರು:ಬ್ರೈಲ್ ಸೆಂಟರ್ ಮೂರು ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುತ್ತದೆ. ಆದರೆ ಈಗ ಇರುವ ಕೇಂದ್ರ ಚಿಕ್ಕದು ಎಂಬ ಕಾರಣಕ್ಕೆ ವಿಶಾಲ ಜಾಗಕ್ಕೆ ಬ್ರೈಲ್ ಸೆಂಟರ್​​ನ್ನು ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಈ ಕೇಂದ್ರವನ್ನು ಜ್ಞಾನ ಭಾರತಿಗೆ ಸ್ಥಳಾಂತರ ಮಾಡುವುದು ಸೂಕ್ತ. ಅಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ತಿಳಿಸಿದರು.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬ್ರೈನ್​​ ರಿಸೋರ್ಸ್​ ಸೆಂಟರ್​​ನಿಂದ ಆಯೋಜಿಸಿದ್ದ, 'ಉದ್ಯೋಗಾವಕಾಶದ ಬಗ್ಗೆ ಜಾಗೃತಿ' ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಯಾರೂ ಸಹ ಪರಿಪೂರ್ಣರಲ್ಲ. ಎಲ್ಲರಿಗೂ ಒಂದೊಂದು ಬಗೆಯ ಕೊರತೆಗಳಿರುತ್ತವೆ. ಹಾಗೆಯೇ ವಿಕಲಚೇತನರಾದ ನಿಮಗೂ ಕೊರತೆ ಇದೆ. ಆದರೆ ಅದನ್ನು ಎಲ್ಲರಿಗಿಂತ ಭಿನ್ನ ಕೊರತೆ ಎಂದು ನೀವು ಭಾವಿಸಬೇಕಾಗಿಲ್ಲ. ಅದನ್ನು ಮನಸ್ಸಿನಿಂದ ಕಿತ್ತೊಗೆದರೆ ಉನ್ನತ ಸ್ಥಾನಕ್ಕೇರುವಿರಿ ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು. ವಿಶೇಷ ವಿದ್ಯಾರ್ಥಿಗಳಿಗೆ ಉದ್ಯೋಗದ ಕೊರತೆ ಎದುರಾಗಿಲ್ಲ. ಬ್ಯಾಂಕ್ ಮ್ಯಾನೇಜರ್​ಗಳು, ಗಾಯಕರು, ನೃತ್ಯಗಾರರು ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಲೇ ಇದ್ದಾರೆ. ಇನ್ನು ಚೆಸ್ ಪಂದ್ಯಗಳಲ್ಲಂತು ನಾವೆಲ್ಲರೂ ಆಶ್ಚರ್ಯ ಚಕಿತರಾಗುವ ರೀತಿಯಲ್ಲಿ ತಮ್ಮ ಬುದ್ಧಿವಂತಿಕೆ ತೋರುತ್ತಾರೆ. ಇಂತಹ 18 ಸಾವಿರ ವಿಶೇಷ ಮಕ್ಕಳಿಗೆ ತರಬೇತಿ ನೀಡುವ ಅತ್ಯುತ್ತಮ ಕೆಲಸವನ್ನು ಎನೇಬಲ್ ಇಂಡಿಯಾ ಸಂಸ್ಥೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿದರು. ಎನೇಬಲ್ ಇಂಡಿಯಾ ಸಂಸ್ಥೆಗೆ ಸಹಕಾರಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಕಲಚೇತನರಿಗಾಗಿ ವಿಶೇಷ ಕೌಶಲ್ಯ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ. ಕೌಶಲ್ಯ ತರಬೇತಿ ನಂತರ ಯಾವುದೇ ಉದ್ಯೋಗ ದೊರಕಿದರೂ ಅದರಲ್ಲಿ ಉತ್ತಮ ರೀತಿಯಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕು. ಆಗ ನಿಮ್ಮನ್ನು ನಂಬಿದ ಕುಟುಂಬವನ್ನು ಆರ್ಥಿಕವಾಗಿ ಸಲಹಬಹುದು ಹಾಗೂ ಅದರ ಜೊತೆಗೆ ಸಮಾಜದಲ್ಲಿ ಹೆಚ್ಚಿನ ಗೌರವವನ್ನೂ ಸಂಪಾದಿಸುವಿರಿ ಎಂದು ಹೇಳಿದರು.

ನಂತರ ಮಾತಾನಾಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಬಿ.ಕೆ.ರವಿ, ವಿಕಲಚೇತನ ವಿದ್ಯಾರ್ಥಿಗಳಲ್ಲಿ ಗಾಯನ ಮತ್ತು ಜ್ಞಾನ ಅಪರಿಮಿತವಾಗಿರುತ್ತದೆ. ಇದು ಅವರಲ್ಲಿರುವ ವಿಶೇಷ ಪ್ರತಿಭೆ. ಈ ಪ್ರತಿಭೆಯನ್ನೇ ಸಾಧನವಾಗಿ ಬಳಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು.

For All Latest Updates

TAGGED:

ABOUT THE AUTHOR

...view details