ಕರ್ನಾಟಕ

karnataka

ETV Bharat / state

ಹಾಡಹಗಲೇ ಬೈಕ್ ಎಗರಿಸಿದ ಕಳ್ಳರು... ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ - undefined

ಬೆಂಗಳೂರಲ್ಲಿ ಹಾಡಹಗಲೇ ಖದೀಮರು ಬೈಕ್​ ಎಗರಿಸಿರುವ ಘಟನೆ ನಡೆದಿದೆ. ಖದೀಮರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

By

Published : Apr 22, 2019, 11:50 AM IST

ಬೆಂಗಳೂರು: ಹಾಡಹಗಲೇ ಬೈಕ್ ಕಳ್ಳರು ಕೈಚಳಕ ತೋರಿಸಿದ್ದಾರೆ. ಕಳ್ಳರು ಪಾರ್ಕ್​ ಮಾಡಿದ್ದ ಬೈಕ್​​​​ ಕದ್ದು ಪರಾರಿಯಾಗಿರುವ ಘಟನೆ ಶಾಂತಿನಗರ ಹಾಕಿ ಸ್ಟೇಡಿಯಂ ಸಮೀಪದ ಬಿಬಿಎಂಪಿ ಮೈದಾನದ ಮುಂಭಾಗ ನಡೆದಿದೆ.

ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಶಾಂತಿನಗರ ಹಾಕಿ ಸ್ಟೇಡಿಯಂ ಸಮೀಪದ ಬಿಬಿಎಂಪಿ ಮೈದಾನ ಸುತ್ತಾಮುತ್ತಾ ಯಾರದ್ರೂ ಇದ್ದಾರಾ ಎಂದು ನೋಡಿ ನಕಲಿ ಕೀ ಬಳಸಿ ನಿಲುಗಡೆ ಮಾಡಿದ್ದ ಬೈಕ್‌ಗಳ ಹ್ಯಾಂಡ್ ‌ಲಾಕ್ ಓಪನ್ ಮಾಡಿ ಕೆಲವೇ ಕ್ಷಣಗಳಲ್ಲಿ ವಿನೋದ್ ಎಂಬಾತನ ಬೈಕ್ ಎಗರಿಸಿ ಎಸ್ಕೇಪ್ ಆಗಿದ್ದಾರೆ‌.

ಕಳ್ಳರ ಕೈಚಳ ಏರಿಯಾದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಸಂಪೂರ್ಣ ಚಲನವಲನದ ದೃಶ್ಯ ಸೆರೆಯಾಗಿದೆ. ಪದೇಪದೆ ಇದೇ ಸ್ಥಳದಲ್ಲೆ ಸರಣಿ ಬೈಕ್ ಕಳ್ಳತನವಾಗಿದ್ದು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಖಾಕಿ ಬಲೆ ಬೀಸಿದೆ.

For All Latest Updates

TAGGED:

ABOUT THE AUTHOR

...view details