ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿಯಲ್ಲಿ ಕಳ್ಳರ ಕೈಚಳಕ.. ಕಂಪ್ಯೂಟರ್‌, ದಾಖಲೆಗಳನ್ನು ಕದ್ದೊಯ್ದ ಖದೀಮರು - stole documents in Engineer Office

ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿಯಲ್ಲಿನ 3 ಕಂಪ್ಯೂಟರ್‌ಗಳು ಮತ್ತು ಕೆಲ ದಾಖಲೆಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

thieves stole computer from govt office
ಸರ್ಕಾರಿ ಕಚೇರಿಯಲ್ಲಿ ಕಳ್ಳರ ಕೈಚಳಕ

By

Published : Dec 17, 2022, 11:48 AM IST

ಬೆಂಗಳೂರು: ಸರ್ಕಾರಿ ಕಚೇರಿಯಲ್ಲೇ ಕಳ್ಳರು ಕೈಚಳಕ ತೋರಿಸಿರುವ ಘಟನೆ ವಿಧಾನಸೌಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿಯಲ್ಲಿನ ಕೆಲ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳನ್ನು ಖದೀಮರು ಕದ್ದೊಯ್ದಿದ್ದಾರೆ.

ಇತ್ತೀಚೆಗೆ ಲೋಕೋಪಯೋಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿಯಲ್ಲಿ ‌ಹೊಸ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿತ್ತು. ಇದನ್ನು ಮನಗಂಡ ಕಳ್ಳರು ಈ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದಂದು ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ್ದಾರೆ. ಬಳಿಕ ಕಚೇರಿಯ ಕಬೋರ್ಡ್​ನಲ್ಲಿದ್ದ ಕೆಲ ಪ್ರಮುಖ ದಾಖಲೆಗಳು ಹಾಗೂ ಮೂರು ಕಂಪ್ಯೂಟರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ.

ದೂರು ಪ್ರತಿ

ಈ ಕುರಿತು ಇಂಜಿನಿಯರ್ ಅನಂತ್ ಎಂಬುವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಖತರ್ನಾಕ್ ಕಳ್ಳರ ಕೈಚಳಕ, 3.76 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ!

ABOUT THE AUTHOR

...view details