ನೆಲಮಂಗಲ(ಬೆಂಗಳೂರು):ಕಾರಿಗೆ ಕೆಂಪು ಬಣ್ಣ ಬಳಿದು 3 ಲಕ್ಷ ನಗದು, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದ ಡ್ರೈವರ್ ಒಮೇಶ್ ಎಂಬುವವರು ಕಳ್ಳರ ಕೈಚಳಕದಿಂದ ಹಣ ಮತ್ತು ಒಡವೆ ಕಳೆದುಕೊಂಡಿದ್ದಾರೆ.
ಮನೆ ಲೀಜ್ ಹಾಕಿಸಿಕೊಳ್ಳುವ ವಿಚಾರಕ್ಕೆ 3 ಲಕ್ಷ ನಗದು ಮತ್ತು 2 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನ ಬ್ಯಾಗ್ನಲ್ಲಿ ಇಟ್ಟು, ಕಾರನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ ಟೀ ಕುಡಿಯಲು ಅಂಗಡಿಗೆ ಹೋಗಿದ್ದರು. ಆಗ ಚಾಲಾಕಿಗಳು ಕಾರಿಗೆ ಕೆಂಪು ಬಣ್ಣ ಬಳಿದಿದ್ದಾರೆ. ಅಲ್ಲದೇ, ಯಾರೋ ರಕ್ತದ ಬಣ್ಣ ಬಳಿದಿದ್ದಾರೆ ಎಂದು ಹೇಳಿ ಡ್ರೈವರ್ ಅನ್ನು ಕಾರಿನ ಬಳಿ ಬರುವಂತೆ ಮಾಡಿದ್ದಾರೆ. ಇದೇ ಸಮಯದ ಸದುಪಯೋಗ ಪಡಿಸಿಕೊಂಡ ಅವರು ಟೀ ಅಂಗಡಿಯ ಟೇಬಲ್ ಮೇಲೆ ಡ್ರೈವರ್ ಬಿಟ್ಟು ಬಂದಿದ್ದ ಹಣ ಮತ್ತು ಮಾಂಗಲ್ಯ ಸರ ಇದ್ದ ಬ್ಯಾಗ್ಅನ್ನು ಕದ್ದೊಯ್ದಿದ್ದಾರೆ.