ಬೆಂಗಳೂರು:ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಹೋಗುವವರೇ ಎಚ್ಚರ. ಪಂದ್ಯ ವೀಕ್ಷಿಸುವ ಖುಷಿಯಲ್ಲಿರುವ ನಿಮ್ಮ ವಸ್ತುಗಳು ಮಂಗಮಾಯವಾಗಬಹುದು. ಐಪಿಎಲ್ ಪಂದ್ಯಗಳನ್ನೇ ಗುರಿಯಾಗಿಸಿಕೊಂಡಿರುವ ಕಳ್ಳರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ನೋಡಲು ಬಂದಿದ್ದ ಅಭಿಮಾನಿ ಸಂದೀಪ್ ಎಂಬುವವರ ಕೆಟಿಎಂ ಡ್ಯೂಕ್ ಬೈಕ್ ಅನ್ನು ಕಳ್ಳರು ಎಗರಿಸಿದ್ದಾರೆ. ಬೌರಿಂಗ್ ಇನ್ಸ್ಟಿಟ್ಯೂಟ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಚೆನ್ನೈ ಹಾಗೂ ಆರ್ಸಿಬಿ ನಡುವಿನ ಪಂದ್ಯ ವೀಕ್ಷಿಸಲು ಬಂದಿದ್ದ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಆರ್. ರಮೇಶ್ರ ಮೊಬೈಲ್ ಕಳ್ಳತನವಾಗಿದೆ. ಗೇಟ್ ನಂಬರ್ 6 ರಲ್ಲಿ ಸರತಿ ಸಾಲಿನಲ್ಲಿದ್ದ ರಮೇಶ್ರ 80 ಸಾವಿರ ಮೌಲ್ಯದ ಸ್ಯಾಮ್ಸಂಗ್ ಎಸ್- 21 ಮೊಬೈಲ್ ಕಳ್ಳತನ ವಾಗಿದ್ದು, ಅವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂದ್ಯಗಳ ಫಲಿತಾಂಶ:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಕಾದಾಡಿತ್ತು. ಬೆಂಗಳೂರು ತಂಡ 8 ವಿಕೆಟ್ಗಳ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್ಸಿಬಿಗೆ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿಸ್ರ ಅದ್ಭುತ ಆಟ ಗೆಲುವು ತಂದುಕೊಟ್ಟಿತು.