ಬೆಂಗಳೂರು :ಲಾಕ್ಡೌನ್ ಸಡಿಲಿಕೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಡಕಾಯಿತಿ, ಸುಲಿಗೆ, ವಾಹನ ಕಳವು ಸೇರಿ 20 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಹೆಣ್ಣೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಸಡಿಲಿಕೆ ಸಂದರ್ಭದಲ್ಲಿ ಕೈಚಳಕ ತೋರಿದ ಆರೋಪಿಗಳು ಅಂದರ್
ಹೆಣ್ಣೂರು, ಭಾರತೀನಗರ, ಪುಲಕೇಶಿನಗರ, ರಾಮಮೂರ್ತಿನಗರ ಸೇರಿದಂತೆ ಒಟ್ಟು 20 ಪ್ರಕರಣ ಪತ್ತೆ ಹಚ್ಚಿದ್ದಾರೆ..
ಅರ್ಫಾತ್ ಅಹ್ಮದ್ ಅಲಿಯಾಸ್ ಮೊಹಮ್ಮದ್ ಅರ್ಫಾತ್, ಅಮೀನ್ ಅಲಿಯಾಸ್ ಕಳ್ಳಿ ಅಮೀನ್, ರವಿ ಬಂಧಿತ ಆರೋಪಿಗಳು. ಇವರು ಲಾಕ್ಡೌನ್ ಸಂದರ್ಭದ ಸಡಿಲಿಕೆ ಸಮಯವನ್ನು ಸದ್ಬಳಕೆ ಮಾಡಿಕೊಂಡು ಬಾಣಸವಾಡಿ, ಕೆಆರ್‌ಪುರಂ, ಎಲೆಕ್ಟ್ರಾನಿಕ್ ಸಿಟಿ, ಫ್ರೇಜರ್ಟೌನ್, ರಿಂಗ್ ರಸ್ತೆ, ಹಾಗೆ ಸರ್ವೀಸ್ ರಸ್ತೆ ಬಳಿ ಬೈಕ್ ಸವಾರರು ಹಾಗೂ ಕಾರು ಚಾಲಕರನ್ನ ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು.
ಹೀಗಾಗಿ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಿ ಸದ್ಯ ಆರೋಪಿಗಳನ್ನ ಬಂಧಿಸಿದ್ದಾರೆ. ಹಾಗೆಯೇ ಹೆಣ್ಣೂರು, ಭಾರತೀನಗರ, ಪುಲಕೇಶಿನಗರ, ರಾಮಮೂರ್ತಿನಗರ ಸೇರಿದಂತೆ ಒಟ್ಟು 20 ಪ್ರಕರಣ ಪತ್ತೆ ಹಚ್ಚಿದ್ದಾರೆ. ಸದ್ಯ ಬಂಧಿತರಿಂದ ಎರಡು ಕಾರು, ನಾಲ್ಕು ದ್ವಿಚಕ್ರ ವಾಹನ, ಎರಡು ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.