ಕರ್ನಾಟಕ

karnataka

ETV Bharat / state

ಸ್ಕಿಮ್ಮರ್ ಡಿವೈಸ್‌ ಬಳಸಿ ಎಟಿಎಂನಿಂದ​ ಹಣ ದೋಚುತ್ತಿದ್ದ ಆರೋಪಿಗಳ ಬಂಧನ - ಕಳ್ಳತನ ಸುದ್ದಿ

ಸ್ಕಿಮ್ಮರ್​ ಬಳಸಿ ಎಟಿಎಂನಿಂದ ಹಣ ದೋಚುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಸ ಟ್ರಿಕ್ಸ್ ಬಳಸಿ​ ಹಣ ದೋಚುತ್ತಿದ್ದ ಆರೋಪಿಗಳು ಅಂದರ್
ಹೊಸ ಟ್ರಿಕ್ಸ್ ಬಳಸಿ​ ಹಣ ದೋಚುತ್ತಿದ್ದ ಆರೋಪಿಗಳು ಅಂದರ್

By

Published : Dec 3, 2019, 7:42 PM IST

ಬೆಂಗಳೂರು : ಹೊಸ ತಂತ್ರ​ ಬಳಸಿ ಎಟಿಎಂನಿಂದ ಹಣ ದೋಚುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು ಹರಿಯಾಣ ಮೂಲದ ಶಹಜಾದ್ ಮತ್ತು ಶಾಹೀದ್ ಎಂಬುವವರನ್ನು ಬಂಧಿಸಿದ್ದಾರೆ.

ಹೊಸ ತಂತ್ರ ಬಳಸಿ​ ಹಣ ದೋಚುತ್ತಿದ್ದ ಆರೋಪಿಗಳು ಅಂದರ್

ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಬಿಐ ಬ್ಯಾಂಕ್​ಗೆ ಥಾಮಸ್ ಎಂಬುವವರು ಎಟಿಎಂ ಪಾಸ್ವರ್ಡ್ ಪಿನ್ ಬದಲಾಯಿಸಲು ತೆರಳಿದ್ದಾರೆ. ಈ ವೇಳೆ ಎಟಿಎಂ ಕಾರ್ಡ್ ಸ್ವೈಪ್ ಮಾಡುವಾಗ ಕಾರ್ಡ್ ಮೆಶಿನ್‌ನಲ್ಲಿ ಸಿಲುಕಿಕೊಂಡು ಅನುಮಾನಗೊಂಡಿದ್ದಾರೆ. ಸ್ವೈಪ್ ಮಾಡುವ ಗ್ರೀನ್ ಕ್ಯಾಪ್ ಹೊರ ತೆಗೆದಾಗ ಗ್ರೀನ್ ಕ್ಯಾಪ್‌ನಲ್ಲಿ ಸ್ಕಿಮ್ಮರ್ ಡಿವೈಸ್ ಅಳವಡಿಸಿರೋದನ್ನು ನೋಡಿ ಬ್ಯಾಂಕ್ ಹಾಗೂ ಜಾಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ‌ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details