ಕರ್ನಾಟಕ

karnataka

ETV Bharat / state

ಹಣ ಕದ್ದು ಪರಾರಿಯಾಗುತ್ತಿದ್ದ ಖದೀಮರನ್ನು ಸೆರೆಹಿಡಿದ ಜನ - ಬೆಂಗಳೂರಿನಲ್ಲಿ ಹಣ ಡ್ರಾ ಮಾಡಿಕೊಂಡು ತೆರಳಿದ್ದ ವ್ಯಕ್ತಿ

ಬೆಂಗಳೂರಲ್ಲಿ ಹಣ ಡ್ರಾ ಮಾಡಿಕೊಂಡು ತೆರಳಿದ್ದ ವ್ಯಕ್ತಿವೋರ್ವನನ್ನು ಹಿಂಬಾಲಿಸಿದ್ದ ಖದೀಮರು, ಹಣ ಕದ್ದು ಪರಾರಿಯಾಗುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಸಾರ್ವಜನಿಕರು
ಸಾರ್ವಜನಿಕರು

By

Published : Jan 23, 2020, 11:29 PM IST

ಬೆಂಗಳೂರು: ಬ್ಯಾಂಕ್​ನಿಂದ‌ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಹಣವನ್ನು ದೋಚಿದ್ದ ಖದೀಮರು ಸಿಕ್ಕಿಬಿದ್ದಿದ್ದಾರೆ. ಸಾರ್ವಜನಿಕರ ಸಹಾಯದಿಂದ ಖದೀಮರನ್ನು ಹಿಡಿದ ವ್ಯಕ್ತಿ ಬಳಿಕ ಅವರನ್ನು ರಾಜಗೋಪಾಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಲಕ್ಷ್ಮಣ್ ಎಂಬುವರು‌ ಪೀಣ್ಯದ ಬ್ಯಾಂಕ್ ಆಫ್ ಇಂಡಿಯಾದಿಂದ 3 ಲಕ್ಷ ರೂ.‌ಹಣ ಡ್ರಾ ಮಾಡಿಕೊಂಡು ಬ್ಯಾಂಕ್​ನಿಂದ ಹೊರ ಬಂದಿದ್ದರು. ಹಣವನ್ನು ಬೈಕ್ ಡಿಕ್ಕಿಯಲ್ಲಿಟ್ಟುಕೊಂಡು ಮನೆಗೆ ತೆರಳುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳು ಪೀಣ್ಯದಿಂದ ರಾಜಗೋಪಾಲ ನಗರದವರೆಗೆ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದರು. ಮನೆ ಹತ್ತಿರ ಬಂದಾಗ ಲಕ್ಷ್ಮಣ್​​​ ಬೈಕ್​ನಿಂದ ಇಳಿದು‌ ಮನೆಗೆ ಹೋಗಿದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕಿದ್ದ ಸಮಯ ಸಾಧಕರು ಬೈಕ್​ನ ಡಿಕ್ಕಿಯಲ್ಲಿಟ್ಟಿದ್ದ ಹಣ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಅಷ್ಟೊತ್ತಿಗಾಗಲೇ ಬೈಕ್ ಮಾಲೀಕ ಚೇಸ್ ಮಾಡಿ ಓರ್ವನನ್ನು ಹಿಡಿದಿದ್ದರು. ಅಲ್ಲದೇ ಸ್ಥಳೀಯರ ಸಹಕಾರದಿಂದ ಇನ್ನಿಬ್ಬರನ್ನು ಹಿಡಿದು ರಾಜಗೋಪಾಲ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details