ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಭದ್ರತೆಗಾಗಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನೇ ಕಳ್ಳ ಎಗರಿಸಿರುವ ಪ್ರಕರಣ ನಡೆದಿದೆ.
ಸಿಸಿಟಿವಿಯನ್ನೇ ಕದ್ದೊಯ್ದ ಆಸಾಮಿ: ಕಳ್ಳನ ಕೈಚಳಕ ಸೆರೆ - ಬೆಂಗಳೂರು ಸಿಸಿಟಿವಿ ಕದ್ದ ಕಳ್ಳ
ರಾಜ್ಯ ರಾಜಧಾನಿಯಲ್ಲಿ ಭದ್ರತೆ ದೃಷ್ಟಿಯಿಂದ ಅಳವಡಿಸಿದ್ದ ಸಿಸಿ ಕ್ಯಾಮರವನ್ನೇ ಕಳ್ಳನೊಬ್ಬ ಎಗರಿಸಿರುವ ಘಟನೆ ನಡೆದಿದೆ.
ಕಳ್ಳನ ಕೈಚಳಕ ಸೆರೆ
ಕಮಲಾನಗರದ ಮಾರ್ಕೆಟ್ ರಸ್ತೆಯ ಅಂಗಡಿಯೊಂದರ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರ ಕಳ್ಳತನವಾಗಿದೆ. ಮಧ್ಯರಾತ್ರಿ ಆಗಮಿಸಿದ ವ್ಯಕ್ತಿ ಶಾಪ್‌ವೊಂದಕ್ಕೆ ಆಗಮಿಸಿ ಅಂಗಡಿ ಸುತ್ತಮುತ್ತ ಗಮನಿಸಿದ್ದಾನೆ. ಈ ವೇಳೆ ಅಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ಆತ ಕೂಡಲೇ ಮೇಲೆ ಹತ್ತಿ ಸಿಸಿ ಕ್ಯಾಮೆರಾ ತೆಗೆದು ಪರಾರಿಯಾಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
Last Updated : Jan 5, 2020, 3:03 PM IST