ಬೆಂಗಳೂರು:ರಾಜಧಾನಿಯ ಪಶ್ಚಿಮ ವಿಭಾಗದ ಕಾಟನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಗಡಿಯ ಛಾವಣಿ ಒಡೆದು ತಾಮ್ರ ಮತ್ತು ಹಿತ್ತಾಳೆ ಸಾಮಗ್ರಿಗಳನ್ನು ಕದ್ದಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಮೇಲ್ಛಾವಣಿ ಕೊರೆದು 3 ಲಕ್ಷ ರೂ. ಮೌಲ್ಯದ ತಾಮ್ರ ಕಳ್ಳತನ: ಖದೀಮ ಅಂದರ್ - ಕಾಟನ್ ಪೇಟೆ ಪೊಲೀಸರ ಕಾರ್ಯಾಚರಣೆ
ಸಿಮೆಂಟ್ ಮೇಲ್ಛಾವಣಿ ಒಡೆದು 3 ಲಕ್ಷ ಮೌಲ್ಯದ ತಾಮ್ರ, ಹಿತ್ತಾಳೆ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದ ಖದೀಮನನ್ನು ಪೊಲೀಸರು ಕದ್ದ ಮಾಲ್ಲು ಸಮೇತ ಬಂಧಿಸಿದ್ದಾರೆ.
![ಮೇಲ್ಛಾವಣಿ ಕೊರೆದು 3 ಲಕ್ಷ ರೂ. ಮೌಲ್ಯದ ತಾಮ್ರ ಕಳ್ಳತನ: ಖದೀಮ ಅಂದರ್ theft](https://etvbharatimages.akamaized.net/etvbharat/prod-images/768-512-04:41:38:1622805098-kn-bng-02-3lakh-precious-metals-theft-one-person-arrested-by-cotton-pet-police-ka10032-04062021143248-0406f-1622797368-477.jpg)
theft
ಅಂಬೇಡ್ಕರ್ ನಗರದ ಆರ್. ರವಿ ಎಂಬಾತ ಬಂಧಿತ ಆರೋಪಿ. ಬಂಧಿತನಿಂದ 3 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆ ವಶಕ್ಕೆ ಪಡೆಯಲಾಗಿದೆ. ಸುಲ್ತಾನ್ ಪೇಟೆ ಮುಖ್ಯರಸ್ತೆಯ ಮೆಟಲ್ ಅಂಗಡಿ ದೋಚಿದ್ದ ಆರೋಪಿ ರವಿ, ಲಾಕ್ಡೌನ್ ವೇಳೆ ಅಂಗಡಿಗೆ ಬೀಗ ಹಾಕಿ ಊರಿಗೆ ಹೋಗಿರುವುದು ಮತ್ತು ಸುತ್ತಮುತ್ತ ಯಾರೂ ಇಲ್ಲದ್ದನ್ನು ಗಮನಿಸಿಕೊಂಡೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ.
ಅಂಗಡಿಯ ಮೇಲ್ಛಾವಣಿ ಸಿಮೆಂಟ್ ಶೀಟಿನದ್ದಾಗಿರುವುದರಿಂದ ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.