ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಮೆಡಿಕಲ್‌ ಶಾಪ್ ನುಗ್ಗಿ ಕಳ್ಳತನ ಯತ್ನ: ಮೆಡಿಕಲ್​ ಶಾಪ್​ ಒಳಗೆ ಲಾಕ್​ ಆದ ಕಳ್ಳ - ಈಟಿವಿ ಭಾರತ ಕನ್ನಡ

ಮೆಡಿಕಲ್​ ಶಾಪ್​ಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು, ಸಾರ್ವಜನಿಕರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

thief-arrested-in-bengaluru
ರಾತ್ರೋರಾತ್ರಿ ಮೆಡಿಕಲ್‌ ಶಾಪ್ ನುಗ್ಗಿ ಕಳ್ಳತನ ಯತ್ನ: ಮೆಡಿಕಲ್​ ಶಾಪ್​ ಒಳಗೆ ಲಾಕ್​ ಆದ ಕಳ್ಳ

By

Published : Nov 15, 2022, 11:05 PM IST

ಬೆಂಗಳೂರು :ಎರಡು ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಕಳ್ಳ ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ. ಮೆಡಿಕಲ್​ ಶಾಪ್​ಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್ (35) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿ ಆಶೋಕ್​ ನ.13ರಂದು ಮುಂಜಾನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಮೂರು ಅಂಗಡಿಗಳ ಬಾಗಿಲನ್ನು ಮುರಿದಿದ್ದಾನೆ. ಈ ಪೈಕಿ ಮೆಡಿಕಲ್ ಶಾಪ್ ಬೀಗ ಮುರಿದು‌‌ ಒಳನುಗ್ಗಿದ್ದ ಕಳ್ಳನನ್ನು ಸ್ಥಳೀಯರು ಅಲ್ಲೇ ಬೀಗ ಹಾಕಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಲ್ಲಿ ಮೆಡಿಕಲ್ ಸ್ಟೋರ್ ನಲ್ಲಿದ್ದ ಮಾತ್ರೆಗಳನ್ನು ನುಂಗಿ ಸಾಯುವ ಬೆದರಿಕೆ ಹಾಕಿದ್ದಾನೆ.

ರಾತ್ರೋರಾತ್ರಿ ಮೆಡಿಕಲ್‌ ಶಾಪ್ ನುಗ್ಗಿ ಕಳ್ಳತನ ಯತ್ನ: ಮೆಡಿಕಲ್​ ಶಾಪ್​ ಒಳಗೆ ಲಾಕ್​ ಆದ ಕಳ್ಳ

ಅಷ್ಟರಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಯಶವಂತಪುರ ಪೊಲೀಸರು ಆರೋಪಿಗೆ ಚಿಕಿತ್ಸೆ ಕೊಡಿಸಿ ಜೈಲಿಗಟ್ಟಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈತನ ಬಂಧನದಿಂದ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ :ರಾತ್ರಿ ಕಳ್ಳತನ ಮಾಡಿ ಮುಂಜಾನೆ ಡ್ಯೂಟಿಗೆ ಹಾಜರ್ ಆದ ಸಿಬ್ಬಂದಿ..

ABOUT THE AUTHOR

...view details